ಹಲ್ಲೆ ಪ್ರಕರಣದಲ್ಲಿ 15 ಜನರ ಬಂಧನ
ಧಾರವಾಡ: ವ್ಯಕ್ತಿಯೋರ್ವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗರಗ ಠಾಣಾ ಪೊಲೀಸರು 15 ಜನರನ್ನು ಬಂಧಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ತಾಲೂಕಿನ ಕೊಟಬಾಗಿ ಗ್ರಾಮದ ಬಸವರಾಜ ವಿಠ್ಠಲ ಕುಂಟನವರ ಎಂಬಾತನ ಮೇಲೆ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಚಿಕ್ಕಮಲ್ಲಿಗವಾಡ ಗ್ರಾಮದ ಮಹಾಂತೇಶ ಚನಬಸಪ್ಪ ಪಾಗದ ಹಾಗೂ ಇನ್ನಿತರರು ಕೂಡಿ ಮಂಗಳವಾರ ರಾತ್ರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ತೀವ್ರ ಗಾಯಗೊಂಡಿರುವ ಬಸವರಾಜ ಕುಂಟನವರ ಈಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿ ಮಹಾಂತೇಶ ಪಾಗದ ಸೇರಿದಂತೆ 15 ಜನರನ್ನು ಗರಗ ಠಾಣಾ ಪಿಎಸೈ ಪಿ. ವೆಂಕಟಸ್ವಾಮಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.