ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಿವೃತ್ತಿ ವೇತನ, ಭತ್ಯೆಗಾಗಿ ಸಾಮೂಹಿಕ ರಜೆ!

Mainashree
Updated On : 25 Jan 2013, 10:57 am

ಕನ್ನಡಪ್ರಭ ವಾರ್ತೆ, ಧಾರವಾಡ, ಜ. 24
ಶಿಕ್ಷಕರಿಗೆ ನಿವೃತ್ತಿ ವೇತನ ಜಾರಿ ಹಾಗೂ ಶಿಕ್ಷಕೇತರರಿಗೆ ಶೇ. 10ರಷ್ಟು ವಿಶೇಷ ಭತ್ಯೆ ನೀಡುವಂತೆ ಆಗ್ರಹಿಸಿ ಸಮೀಪದ ಕ್ಯಾರಕೊಪ್ಪ ಗ್ರಾಮದ ಬಳಿಯ ಜವಾಹರ ನವೋದಯ ವಿದ್ಯಾಲಯದ 42 ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಗುರುವಾರ ಒಂದು ದಿನ ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸಿದರು.
1987ರಲ್ಲಿ ಸಮಗ್ರ ಶಿಕ್ಷಣ ನೀತಿಯಡಿ ಕೇಂದ್ರ ಸರ್ಕಾರದ ಅನುದಾನದ ಮೇಲೆ ತಮಿಳುನಾಡು ಹೊರತು ಪಡಿಸಿ ಇಡೀ ದೇಶದ ಎಲ್ಲ ಜಿಲ್ಲೆಗಳಲ್ಲಿ ಈ ಶಾಲೆಗಳು ಆರಂಭವಾದವು. ಶಾಲೆಗೆ 25 ವರ್ಷ ತುಂಬಿದ್ದು, ಇದೀಗ ಶಿಕ್ಷಕರು ನಿವೃತ್ತಿ ವೇತನ ಇಲ್ಲದಂತಾಗಿ ಕಂಗಾಲಾಗಿದ್ದಾರೆ. ಆದ್ದರಿಂದ ಒಂದು ದಿನದ ಸಾಮೂಹಿಕ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಶಾಲೆಯ ಪ್ರಾಚಾರ್ಯ ಪಿ. ರವಿಕುಮಾರ ಪತ್ರಿಕೆಗೆ ತಿಳಿಸಿದರು. ಶಾಲೆಯಲ್ಲಿ ಸುಮಾರು 500 ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಯಾವುದೇ ತೊಂದರೆ ಆಗದಂತೆ ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಸರ್ಕಾರ ನಮ್ಮ ಕೂಗಿಗೆ ಸ್ಪಂದಿಸಬೇಕಿದೆ. ನವೋದಯ ಶಾಲೆಯ ಕೆಲ ಶಿಕ್ಷಕರಿಗೆ ನಿವೃತ್ತಿ ವೇತನ ಘೋಷಣೆಯಾಗಿದ್ದು, ಕೆಲವರಿಗೆ ಆಗಿಲ್ಲ. ಇಲ್ಲಿ ಮಲತಾಯಿ ಧೋರಣೆ ತಾಳಲಾಗಿದೆ. ಸೇವಾ ಸಿಬ್ಬಂದಿ ಬಗ್ಗೆ ಈ ರೀತಿಯ ವಿರೋಧ ನೀತಿ ಸರಿಯಲ್ಲ. ಕೇಂದ್ರವು ಕೂಡಲೇ ನಿವೃತ್ತಿ ವೇತನ ಘೋಷಿಸಬೇಕು. ಶಾಲೆಯ ಶಿಕ್ಷಕೇತರ ಸಿಬ್ಬಂದಿಗೆ ಶೇ. 10ರಷ್ಟು ವಿಶೇಷ ಭತ್ಯೆ ನೀಡಿಬೇಕೆಂದು ಆಗ್ರಹಿಸಲಾಯಿತು. ಉಪ ಪ್ರಾಚಾರ್ಯ ಚಿನ್ನಪ್ಪ, ಜಿ.ಸಿ. ಜಿನಗಾ, ಅಶೋಕ ಆನಂದ, ಡಿ.ಎಸ್. ಶರ್ಮಾ, ಎಸ್.ಎಸ್. ದಾಸರ, ಎಸ್.ಎಚ್. ವಡ್ಡರ, ರಮಾ ಕುಮಾರಿ, ಎಲ್.ವಿ. ಕುಲಕರ್ಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement