ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಿ

Mainashree
Updated On : 26 Jan 2013, 10:54 am

ಹನುಮಸಾಗರ:  ರೈತ ಬರಗಾಲದಿಂದ ಧೃತಿಗೆಡದೆ ಕೃಷಿ ಹೊಂಡ ಮಾಡಿ ಕೈತೋಟ, ಹೂವಿನ ತೋಟ ಹಾಗೂ ಅನೇಕ ವಾಣಿಜ್ಯ ಬೆಳೆಗಳನ್ನು ಬೆಳೆಯಲು ತಾಂತ್ರಿಕ ಬೇಸಾಯ ಅಳವಡಿಸಿಕೊಳ್ಳುವುದರ ಮೂಲಕ ಸ್ವಾವಲಂಭಿ,ಸ್ವಾಭಿಮಾನದ ಜೀವನ ನಡೆಸಬೇಕು ಎಂದು ಶಾಸಕ ಅಮರೇಗೌಡ ಭಯ್ಯಾಪುರ ಹೇಳಿದರು.
ಇಲ್ಲಿಯ ಗ್ರಾಮದೇವತೆ ದ್ಯಾಮಾಂಬಿಕ ದೇವಸ್ಥಾನದ ಹತ್ತಿರವಿರುವ ಸಮುದಾಯ ಭವನದಲ್ಲಿ ನಡೆದ ಹನುಮಸಾಗರ ಹೋಬಳಿ ಮಟ್ಟದ ಕೃಷಿ ಮಾಹಿತಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಉತ್ತಮ ಕೃಷಿಕರಾಗಿ ಆಯ್ಕೆಯಾದ ಹನುಮಪ್ಪ ಕೊಪ್ಪದ, ನೀಲಪ್ಪ ನೀಲಗಿರಿಯಪ್ಪ, ಶಂಕ್ರಪ್ಪ ಭೀಮಪ್ಪ ಅವರನ್ನು ಶಾಸಕರು ಸನ್ಮಾನಿಸಿ ಬಹುಮಾನದ ಚೆಕ್ ವಿತರಿಸಿದರು. ಕೃಷಿ ವಿಜ್ಞಾನಿಗಳು, ಮಹಾಂತಯ್ಯ ಹಿರೇಮಠ ಮಾತನಾಡಿದರು.
ತಾಪಂ ಸದಸ್ಯ ಪರಶುರಾಮಪ್ಪ ನಂದ್ಯಾಳ, ಗುತ್ತಿಗೆದಾರ ಬಸವರಾಜ ಹಳ್ಳೂರು ಮಾತನಾಡಿ, ಕೃಷಿಯಲ್ಲಿ ಬದಲಾವಣೆ ಅತ್ಯವಶ್ಯವಾಗಿದೆ. ರೈತರು ಕೃಷಿ ಅಧಿಕಾರಿಯಿಂದ ಅಗತ್ಯ ಮಾಹಿತಿ ಪಡೆದು ಉತ್ತಮ ವ್ಯವಸಾಯ ಮಾಡಬೇಕು ಎಂದರು. ಲಲಿತಮ್ಮ ಹುಲ್ಲೂರು ಅಧ್ಯಕ್ಷತೆ ವಹಿಸಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement