ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಗುರುವಿಗೆ ಗೂಸಾ
ಹುಬ್ಬಳ್ಳಿ,: ವಿದ್ಯಾರ್ಥಿನಿಗೆ ಅಶ್ಲೀಲ ಎಸ್ಎಂಎಸ್ ಕಳುಹಿಸಿ ಪೀಡಿಸುತ್ತಿದ್ದ ನಗರದ ನಳಂದಾ ಕಾಲೇಜಿನ ಉಪನ್ಯಾಸಕ ಶಶಿಧರ ಎಂಬಾತನಿಗೆ ಎಬಿವಿಪಿ ಕಾರ್ಯಕರ್ತರು ಶನಿವಾರ ಕಾಲೇಜು ಆವರಣದಲ್ಲಿಯೇ ಗೂಸಾ ನೀಡಿದ್ದಾರೆ. ಉಪನ್ಯಾಸಕ ಶಶಿಧರ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳಿಗೆ ಕಳೆದ ಹಲವು ದಿನಗಳಿಂದ ಅಶ್ಲೀಲವಾಗಿ ಎಸ್ಎಂಎಸ್ ಕಳುಹಿಸುತ್ತಿದ್ದು, ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ. ಮಾನಕ್ಕೆ ಅಂಜಿ ಸುಮ್ಮನಿದ್ದ ವಿದ್ಯಾರ್ಥಿನಿ, ಉಪನ್ಯಾಸಕನ ಉಪಟಳ ಹೆಚ್ಚಾದಾಗ ತನ್ನ ಗೆಳತಿಯರಿಗೆ ವಿಷಯ ತಿಳಿಸಿದ್ದಾಳೆ.ಈ ಪೈಕಿ ಕೆಲವು ವಿದ್ಯಾರ್ಥಿನಿಯರು ತಮಗೂ ಕಾಮುಕ ಉಪನ್ಯಾಸಕ ಇದೇ ರೀತಿ ಕಾಟ ಕೊಡುತ್ತಿದ್ದಾನೆಂದು ಹೇಳಿಕೊಂಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.