4ರಂದು ಐಟಿಐ ಮರುಪರೀಕ್ಷೆ
ಬಳ್ಳಾರಿ: ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯದ ಆದೇಶದಂತೆ ಜನವರಿ 22ರಂದು ನಡೆದ ಎಲೆಕ್ಟ್ರಿಷಿಯನ್ ವೃತ್ತಿಯ ಕಾರ್ಯಾಗಾರ ಲೆಕ್ಕ ಮತ್ತು ವಿಜ್ಞಾನ ವಿಷಯದ ಮರುಪರೀಕ್ಷೆಯನ್ನು ಫೆ. 4ರ ಮಂಗಳವಾರ ಬೆಳಗ್ಗೆ 9 ಗಂಟೆಗೆ ನಡೆಸಲಾಗುವುದು.
ಪರೀಕ್ಷಾರ್ಥಿಗಳು ಪರೀಕ್ಷೆಗೆ ತಮ್ಮ ಹಳೆಯ ಪ್ರವೇಶಪತ್ರದೊಂದಿಗೆ ಹಾಜರಾಗಬೇಕು. ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರಗಳ ಪ್ರಾಚಾರ್ಯರು ತಮ್ಮ ಸಂಸ್ಥೆಯ ಪರೀಕ್ಷಾರ್ಥಿಗಳಿಗೆ ಮರು ಪರೀಕ್ಷೆ ದಿನಾಂಕ ತಿಳಿಸಬೇಕು ಎಂದು ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.