ಕೈಗಾರಿಕಾ ತರಬೇತಿ: ಅರ್ಜಿ ಆಹ್ವಾನ
ಗದಗ: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮುಂಡರಗಿ ಇಲ್ಲಿ ಆಗಸ್ಟ್ 201-14ನೇ ಸಾಲಿಗೆ ಐಎಂಸಿ(ಇನ್‌ಸ್ಟಿಟ್ಯೂಟ್ ಮ್ಯಾನೇಜಮೆಂಟ್ ಕಮೀಟಿ) ಕೋಟಾದಡಿ ಪ್ರವೇಶಕ್ಕಾಗಿ ಎಲೆಕ್ಟಿಷಿಯನ್ ವೃತ್ತಿಗೆ-05 ಹಾಗೂ ಫಿಟ್ಟರ್ ವೃತ್ತಿಗೆ-05 ಸೀಟುಗಳು ಲಭ್ಯವಿದ್ದು, ಎಸ್ಸೆಸ್ಸೆಲ್ಸಿ ಪಾಸಾದ ಅರ್ಹ ಆಸಕ್ತರು ಜು. 3ರೊಳಗೆ ಅರ್ಜಿ ಸಲ್ಲಿಸಬೇಕು. ಆಯ್ಕೆಗೊಂಡವರು ಅಭಿವೃದ್ಧಿ ಶುಲ್ಕ ಮತ್ತು ಪ್ರವೇಶ ಶುಲ್ಕ ಪಾವತಿಸಬೇಕಾಗಿರುತ್ತದೆ. ಮಾಹಿತಿಗಾಗಿ ತರಬೇತಿ ಅಧಿಕಾರಿಗಳು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮುಂಡರಗಿ (08371-262507) ಅವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.