ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಾಮೆಡ್-ಕೆ ಕೌನ್ಸೆಲಿಂಗ್ ಆತಂಕದ್ದು: ಎಐಡಿಎಸ್‌ಓ

Lingaraj Badiger
Updated On : 5 Jul 2013, 10:58 am

ಧಾರವಾಡ: ಸಿಇಟಿ ಕೌನ್ಸೆಲಿಂಗ್ ಆರಂಭವಾಗುವ ಮೊದಲೇ ಕಾಮೆಡ್-ಕೆ ಕೌನ್ಸೆಲಿಂಗ್‌ಗೆ ಅವಕಾಶ ನೀಡುವ ಮೂಲಕ ರಾಜ್ಯ ಸರ್ಕಾರ ಮತ್ತು ಪರೀಕ್ಷಾ ಪ್ರಾಧಿಕಾರ ವಿದ್ಯಾರ್ಥಿ, ಪಾಲಕರನ್ನು ಆತಂಕಕ್ಕೆ ತಳ್ಳಿದಂತಾಗಿದೆ. ಇಂಥ ಕ್ರಮ ಸರಿಯಲ್ಲ ಎಂದು ಎಐಡಿಎಸ್‌ಓ ಸಂಘಟನೆ ಜಿಲ್ಲಾ ಘಟಕ ಖಂಡಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆ, ಈ ವರ್ಷ ರಾಜ್ಯ ಸರ್ಕಾರ ಮತ್ತು ಪರೀಕ್ಷಾ ಪ್ರಾಧಿಕಾರಗಳು ಧನದಾಹಿ ಖಾಸಗಿ ಮ್ಯಾನೇಜ್‌ಮೆಂಟ್‌ಗಳ ಜತೆಗೆ ಕೈಜೋಡಿಸಿ ಕಾಮೆಡ್-ಕೆ ಕೌನ್ಸೆಲಿಂಗ್‌ಗೆ ಮೊದಲೇ ಅವಕಾಶ ನೀಡಿದೆ.
ಸರ್ಕಾರದ ಈ ಕ್ರಮ ಸಿಇಟಿ ಕೋಟಾದ ಸೀಟುಗಳನ್ನು ತಡೆ ಹಿಡಿದು ನಂತರ ಈ ಸೀಟುಗಳನ್ನು ಹೆಚ್ಚುವರಿ ಹಣಕ್ಕೆ ಹರಾಜು ಹಾಕುವ ತಂತ್ರ ನಡೆದಿದೆ ಎಂಬ ಆತಂಕ ವಿದ್ಯಾರ್ಥಿ-ಪೋಷಕರಲ್ಲಿದೆ. ಸಿಇಟಿ ಕೋಟಾದಲ್ಲಿ ಸೀಟು ದೊರಕದೆ ಹೋಗಬಹುದೆಂಬ ಆತಂಕದಿಂದ ಅನಿವಾರ್ಯವಾಗಿ ವಿದ್ಯಾರ್ಥಿಗಳು ಹೆಚ್ಚುವರಿ ಶುಲ್ಕ ನೀಡಿ ಕಾಮೆಡ್-ಕೆ ಕೋಟಾದ ಸೀಟುಗಳಲ್ಲಿ ಪ್ರವೇಶ ಪಡೆಯಬೇಕಿದೆ.
ಈ ಗೊಂದಲದ ಪೂರ್ಣ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ವಹಿಸಿಕೊಳ್ಳಬೇಕು. ಈಗ ಕಾಮೆಡ್-ಕೆ ಕೋಟಾದಲ್ಲಿ ಸೀಟು ಪಡೆದ ವಿದ್ಯಾರ್ಥಿಗಳಿಗೆ ಮುಂದೆ ಎರಡನೇ ಸುತ್ತಿನ ಸಿಇಟಿ ಕೌನ್ಸೆಲಿಂಗ್‌ಗೆ ಪ್ರವೇಶ ದೊರಕಿದರೆ, ಈ ಸೀಟುಗಳನ್ನು ಮ್ಯಾನೇಜ್‌ಮೆಂಟ್‌ಗಳಿಗೆ ಹಿಂತಿರುಗಿಸುವ ಹಕ್ಕನ್ನು ವಿದ್ಯಾರ್ಥಿಗಳಿಗೆ ನೀಡಬೇಕು. ವಿದ್ಯಾರ್ಥಿಗಳ ಶುಲ್ಕಗಳನ್ನು ಪೂರ್ಣವಾಗಿ ಮರುಪಾವತಿಸಲು ಖಾಸಗಿ ಕಾಲೇಜುಗಳಿಗೆ ಆದೇಶಿಸಬೇಕು ಎಂದು ಸಂಘಟನೆಯ ಶರಣು ಗೊನವಾರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement