ತಾಂತ್ರಿಕ ರಂಗದಲ್ಲಿ ಮಹಿಳೆಯರು
ಕನ್ನಡಪ್ರಭ ವಾರ್ತೆ, ಧಾರವಾಡ, ಜು. 5
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ವಿಜ್ಞಾನ ಮತ್ತು ತಾಂತ್ರಿಕ ರಂಗದಲ್ಲಿ ಮಹಿಳೆಯರು ಎಂಬ ವಿಷಯದ ಕುರಿತು ನಡೆದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಭೂಪಾಲದ ಆಜಾದ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿಭಾಗದ ಮುಖ್ಯಸ್ಥೆ ಡಾ. ಸರೋಜ ರಂಗನೇಕರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಮಹಿಳೆಯರಲ್ಲಿ ಬಹುಮುಖ ಪ್ರತಿಭೆಗಳಿದ್ದು, ಮನೆ ಮತ್ತು ವೃತ್ತಿ ಜೀವನ ಯಶಸ್ವಿಯಾಗಿ ನಿಭಾಯಿಸುವ ಶಕ್ತಿ ಇದೆ. ಪ್ರಸ್ತುತ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು.
ಅರವಿಂದ ಕುಲಕರ್ಣಿ ಹಾಗೂ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಯೋಜನಾ ನಿರ್ದೇಶಕ ಶ್ರೇಯಸ್ ಕುಮಾರ ಮಾತನಾಡಿದರು. ಪ್ರಾಚಾರ್ಯ ಡಾ. ಎಸ್. ಮೋಹನಕುಮಾರ್, ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿನೇಂದ್ರ ಪ್ರಸಾದ, ಉಪ ಕಾರ್ಯದರ್ಶಿ ಜೀವಂದರ ಕುಮಾರ್, ಡಾ.ಕೆ. ಗೋಪಿನಾಥ, ಎಂ.ಆರ್. ಕಪಾಲಿ, ಡಾ. ಸಿ.ಡಿ. ಲಕ್ಕಣ್ಣವರ, ಪ್ರೊ. ವಿ.ಕೆ. ಪರ್ವತಿ, ಮಹಾದೇವ ದೊಡ್ಡಮನಿ ಇದ್ದರು. ಜಯಶ್ರೀ ಕೆರಿಮನಿ ಹಾಗೂ ವರ್ಷಾ ಜೋಶಿ ಪ್ರಾರ್ಥಿಸಿದರು. ಡಾ. ವಿಜಯಾ ಸಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎ.ಎ. ಕಿತ್ತೂರ ನಿರೂಪಿಸಿದರು. ಪ್ರೊ. ಲೋಕೆಶ್ವರಿ ನವಲಗುಂದ ವಂದಿಸಿದರು.