ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮಾನವೀಯ ಮೌಲ್ಯ ಅನುಷ್ಠಾನಗೊಳಿಸಿ

Mainashree
Updated On : 6 Jul 2013, 10:45 am

ಧಾರವಾಡ: ಭಾವನಾತ್ಮಕ ಸಂಬಂಧಗಳನ್ನು ಗಟ್ಟಿಗೊಳಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ಅನುಷ್ಠಾನಗೊಳಿಸುವುದು ಪ್ರೋಬಸ್ ಸಂಸ್ಥೆಯ ಮುಖ್ಯ ಉದ್ದೇಶ ಎಂದು ಡಾ. ಜಿ.ವಿ. ಉದಪುಡಿ ಹೇಳಿದರು.
ಇಲ್ಲಿನ ಗಾಂಧಿನಗರದ ಪ್ರೋಬಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸ್ಥೆ ಸಹಾಯ ಸಹಕಾರ ನೀಡುವ ಮೂಲಕ ಮಾನವ ಅವಶ್ಯಕತೆಗಳನ್ನು ಅರಿತು ಅವುಗಳನ್ನು ಪೂರೈಸುತ್ತಿದೆ. ಅಲ್ಲದೇ, ಹಿರಿಯ ನಾಗರಿಕರ ಪಕ್ವ ವಿಚಾರಗಳಿಂದ ರಚನಾತ್ಮಕ ಕೆಲಸ ಮಾಡಬೇಕಿದ್ದು, ಸಾಮಾಜಿಕ ಕಳಕಳಿ ಹೊಂದಬೇಕೆಂದು ಹೇಳಿದರು. ಸಾಹಿತಿ ಶ್ರೀನಿವಾಸ ವಾಡಪ್ಪಿ, ಎಂ.ಯು. ಕರ್ಜಗಿ, ಡಾ. ಆರ್.ಎನ್. ನಾಡಗೌಡ ಮಾತನಾಡಿದರು. ಆರ್. ನಿರ್ಮಲಾ, ತಿಮ್ಮಪ್ಪಗೌಡರ, ಎಸ್.ಎಸ್. ರೋಣದ, ಪ್ರೊ.ಎಸ್.ಎಸ್. ಬೀಳಗಿ, ನಿಂಗಣ್ಣ ಕುಂಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement