ಡಾ. ಸತ್ತೂರ್ ಅವರಿಂದ ಮಧುಮೇಹ ತಿಳಿವಳಿಕೆ
ಹುಬ್ಬಳ್ಳಿ: ಆಶಾ ಹೃದಯ ಮತ್ತು ಮಧುಮೇಹ ಸಂಸ್ಥೆ, ಸತ್ತೂರ ಮೆಡಿಕಲ್ ಕೇರ್, ಮಜೇಥಿಯಾ ಫೌಂಡೇಷನ್ ಹಾಗೂ ಸಿಕ್ಕಲಿಗಾರ ಸಮಾಜ ಅಭಿವೃದ್ಧಿ ಸಂಘದ ವತಿಯಿಂದ ಮಧುಮೇಹ ಉಚಿತ ತಿಳಿವಳಿಕೆ ಶಿಬಿರ ಆಯೋಜಿಸಲಾಗಿತ್ತು.
ಮಧುಮೇಹ ತಿಳಿವಳಿಕೆ ಶಿಬಿರ ಉದ್ಘಾಟಿಸಿದ ಮಾಜಿ ಮಹಾಪೌರ ಪ್ರಕಾಶ ಕ್ಯಾರಕಟ್ಟಿ ಅವರು, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಆರೋಗ್ಯವನ್ನು ಸದೃಢವಾಗಿ ಇರಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು. ಶಿಬಿರದ ನೇತೃತ್ವ ವಹಿಸಿದ್ದ ಡಾ. ಜಿ.ಬಿ.ಸತ್ತೂರ ಅವರು ಸುಮಾರು 300ಕ್ಕೂ ಹೆಚ್ಚು ಜನರ ರಕ್ತದಲ್ಲಿನ ಸಕ್ಕರೆ ಅಂಶ ಪರೀಕ್ಷಿಸಿದರು. ಈ ಸಂದರ್ಭದಲ್ಲಿ ಜಿತೇಂದ್ರ ಮಜೇಥಿಯಾ, ಹರೀಶ ಜಂಗ್ಲಿ ಮತ್ತು ರಾಜಪ್ಪ ಜಂಗ್ಲಿ ಇದ್ದರು.