ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅಭಿವೃದ್ಧಿ ಕಾಮಗಾರಿ ಮಾಹಿತಿ ಅಪೂರ್ಣ: ಅಸಮಾಧಾನ

Lingaraj Badiger
Updated On : 8 Jul 2013, 11:40 am

ಕಲಘಟಗಿ: ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಅಪೂರ್ಣ ಮಾಹಿತಿ, ಅಸಮಂಜಸ ಉತ್ತರ ನೀಡಿದ್ದಕ್ಕೆ ತಾಪಂ ಅಧ್ಯಕ್ಷ ಬಸವಣ್ಣಯ್ಯ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಜರುಗಿದ ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ತಾಪಂ ಸಭೆಯಲ್ಲೂ ಇದೇ ರಾಗ ಹಾಡಿದರೆ ಅಭಿವೃದ್ಧಿ ಕಾಮಗಾರಿ ಸಭೆ ನಡೆಸುವುದಾದರೂ ಏಕೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಂತೆ ಸಭೆಯಲ್ಲಿದ್ದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಆರ್. ವೀರಕರ ಇಲಾಖೆ ಅಧಿಕಾರಿಗಳಿಗೆ ನಿಗದಿತ ವೇಳೆಗೆ ಪೂರ್ಣ ಮಾಹಿತಿ ಪೂರೈಸುವಂತೆ ಸೂಚಿಸಿದರು.
ಸಹಾಯಕ ಕೃಷಿ ನಿರ್ದೇಶಕ ಪ್ರದೀಪ ಕ್ಯೂಟರ್ ಮಾತನಾಡಿ, ತಾಲೂಕಿನಲ್ಲಿ ಮುಂಗಾರು ಬಿತ್ತನೆ ಬೀಜ, ಗೊಬ್ಬರ ಕೊರತೆ ಇಲ್ಲ. ಇದುವರೆಗೆ ತಾಲೂಕಿನಲ್ಲಿ ಶೇ. 75ರಷ್ಟು ಬಿತ್ತನೆಯಾಗಿದೆ. ಸಧ್ಯ ಸೋಯಾ ಅವರೆಗೆ ಕೀಟ ಬಾಧೆ ಆವರಿಸಿದ್ದು, ಈ ಕುರಿತು ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಕೀಟ ಬಾಧೆ ನಿಯಂತ್ರಿಸಲು ಕ್ರಮ ಕೈಗೊಂಡಿರುವುದಾಗಿ ಹೇಳಿದರು.
ನಂತರ ಕಂದಾಯ, ರೇಷ್ಮೆ, ಜಿಪಂ ಉಪವಿಭಾಗ, ಅರಣ್ಯ ಇಲಾಖೆಯವರು ತಮ್ಮ ಇಲಾಖೆಗಳ ಮಾಹಿತಿ ನೀಡಿದರು. ತಾಪಂ ಉಪಾಧ್ಯಕ್ಷೆ ಕಾಶವ್ವ ಮುಂದಿನಮನಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ರಜಪೂತ, ತಾಪಂ ಸದಸ್ಯರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement