ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಧರ್ಮ, ಜಾತಿಯಿಂದ ಸದೃಢ ದೇಶ ನಿರ್ಮಾಣ ಅಸಾಧ್ಯ: ನ್ಯಾ. ಕುಮಾರ

Lingaraj Badiger
Updated On : 8 Jul 2013, 11:40 am

ಧಾರವಾಡ: ಯಾವುದೇ ಒಂದು ಧರ್ಮ ಹಾಗೂ ಜಾತಿಯಿಂದ ಸದೃಢವಾದ ದೇಶ ಹಾಗೂ ಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎನ್. ಕುಮಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆ ಹಾಗೂ ಸೌಂದರ್ಯ ಭಕ್ತಿ ಸಂಸ್ಕೃತಿ ಪ್ರತಿಷ್ಠಾನ ಜಂಟಿಯಾಗಿ ಭಾನುವಾರ ಏರ್ಪಡಿಸಿದ್ದ ವಿದ್ಯಾರಣ್ಯ ವೈಭವ ಸಂಸ್ಮರಣೋತ್ಸವದಲ್ಲಿ ಮಾತನಾಡಿದ ಅವರು, ಉತ್ತಮ ಹಾಗೂ ಸದೃಢ ದೇಶದ ನಿರ್ಮಾಣಕ್ಕೆ ಎಲ್ಲ ವರ್ಗದವರು ಒಕ್ಕೊರಿಲಿನಿಂದ ಶ್ರಮಿಸಿದರೆ ಮಾತ್ರ ಸಾಧ್ಯ ಎಂದು ಅವರು, ಆಗಿನ ಕಾಲದಲ್ಲಿ ವಿದ್ಯಾರಣ್ಯ ಗುರುಗಳು ಹೇಳಿದ್ದರು ಎಂದು ಅವರ ಮಾತನ್ನು ಸ್ಮರಿಸಿದರು.
ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಲ್ಲಿ ವಿದ್ಯಾರಣ್ಯರ ಪಾತ್ರ ಪ್ರಮುಖವಾಗಿತ್ತು. ವೈಭವದ ವಿಜಯನಗರದ ಆರ್ಥಿಕ, ರಾಜಕೀಯ, ಸಾಮಾಜಿಕವಾಗಿ ಸುಗಮವಾಗಿ ಸಾಗಲು ವಿದ್ಯಾರಣ್ಯರೇ ಕಾರಣರಾಗಿದ್ದರು. ಇಂತಹ ಸಂಸ್ಥಾನದ ಕುರಿತು ವಿಶೇಷ ಅಧ್ಯಯನ ಮಾಡಬೇಕಿದೆ. ಆದರೆ, ಪಾಶ್ವಿಮಾತ್ಯ ಸಂಸ್ಕೃತಿ ಹಾಗೂ ಆರ್ಥಿಕತೆಯ ಕುರಿತಂತೆ ಅಧ್ಯಯನಗಳು ನಡೆಯುತ್ತಿವೆ. ಆದ್ದರಿಂದ ನಮ್ಮದೇ ಆದ ವಿಶಿಷ್ಟ ರೀತಿಯ ಆಡಳಿತ ಹಾಗೂ ಆರ್ಥಿಕ ಪರಿಸ್ಥಿತಿ ಹೊಂದಿದ್ದ ವಿಜಯನಗರದ ಕುರಿತು ಆಸಕ್ತಿ ತೋರದಿರುವುದು ವಿಷಾದನೀಯ ಎಂದ ಅವರು, ವಿಜಯನಗರ ಸಾಂಸ್ಕೃತಿಕ ನೆಲೆಯಾಗಿತ್ತು. ಹಾಗಾಗಿ ದೇಶ-ವಿದೇಶಗಳಲ್ಲಿ ವಿಜಯನಗರದ ಹೆಸರು ಗುರುತಿಸಲಾಗುತ್ತಿದೆ ಎಂದರು.
ಬದರಿ ಶಂಕರಾಚಾರ್ಯ ಶಕಟಪುರ ಸಂಸ್ಥಾನದ ಕೃಷ್ಣಾನಂದತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಶಿಕ್ಷಣ ಇಲಾಖೆ ನಿರ್ದೇಶಕ ಗಣಪತಿ ಪಾಟೀಲ, ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀರಾಮ ಭಟ್ಟ, ನಿವೃತ್ತ ಸಂಸ್ಕೃತ ಪಾಧ್ಯಾಪಕ ಡಾ. ವೇಣೀಮಾಧವಶಾಸ್ತ್ರೀ ಜೋಶಿ, ಪ್ರಾಧ್ಯಾಪಕ ಉಮಾಕಾಂತ ಭಟ್ಟ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ ವಿದ್ಯಾರಣ್ಯರ ಕುರಿತಂತೆ ಉಪನ್ಯಾಸ ನೀಡಿದರು. ವಿದ್ವಾನ್ ಮಧುಸೂದನಶಾಸ್ತ್ರಿ ಹಂಪಿಹೊಳಿ ಹಾಗೂ ಶಂಕರ ಕುಲಕರ್ಣಿ, ಉದಯಕುಮಾರ ದೇಸಾಯಿ, ಆರ್.ಬಿ. ಕುಲಕರ್ಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement