ಇಂದು ಪೂರ್ವಭಾವಿ ಸಭೆ
ಧಾರವಾಡ: ರಾಜ್ಯ ವೀರಶೈವ ಪಂಚಮಸಾಲಿ ಸಂಘ ಧಾರವಾಡ ಶಹರ ಮತ್ತು ತಾಲೂಕು ಘಟಕಗಳ ವತಿಯಿಂದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಶಾಸಕರಿಗೆ ಸನ್ಮಾನ ಹಾಗೂ ಬೆಳವಡಿ ಮಲ್ಲಮ್ಮಾಜಿ ಜನ್ಮ ದಿನ ಕಾರ್ಯಕ್ರಮಗಳನ್ನು ಆಗಸ್ಟ್ನಲ್ಲಿ ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಯೋಜನೆಗೆ ಪೂರಕವಾಗಿ ಪೂರ್ವಭಾವಿ ಸಭೆಯನ್ನು ಜು. 9ರ ಸಂಜೆ 5.30ಕ್ಕೆ ವಿದ್ಯಾವರ್ಧಕ ಸಂಘದಲ್ಲಿ ಕರೆಯಲಾಗಿದೆ. ಸಮಾಜದ ಮುಖಂಡರಾದ ಎಸ್.ಎಚ್. ಪಾಟೀಲ, ವೀರಣ್ಣ ವಡ್ಡೀನ, ಶಿವಾನಂದ ಬೀಳಗಿ, ಶಿವಾನಂದ ಹಲಸಗಿ, ನಿಂಗಣ್ಣ ಕರಿಕಟ್ಟಿ, ಉಮೇಶ ಗದ್ದೀಕೇರಿ, ಎಸ್.ಆರ್. ರಾಮನಗೌಡರ್, ಬಿ.ಎಂ. ಮರಿತಮ್ಮನವರ, ಅಜ್ಜಪ್ಪ ಗುಲಾಲದವರ್, ಚನಬಸಪ್ಪ ಕಿತ್ತೂರ, ಮಡಿವಾಳಪ್ಪ ಭಾವಕ್ಕನವರ ಪಾಲ್ಗೊಳ್ಳಲಿದ್ದಾರೆ. ಅಗತ್ಯ ಸಲಹೆ-ಸೂಚನೆ ಕೊಡುವವರು ಮೊ-9449897476ನ್ನು ಸಂಪರ್ಕಿಸಬಹುದು.