ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ವಿವಿಯಿಂದ ನ್ಯಾಯ ದೊರೆಯದಿದ್ದರೆ ಆತ್ಮಹತ್ಯೆ: ನೌಕರ ಬೆದರಿಕೆ

Lingaraj Badiger
Updated On : 11 Jul 2013, 11:33 am

ಧಾರವಾಡ: ಬಾಗಲಕೋಟ ತೋಟಗಾರಿಕೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತಮ್ಮನ್ನು ಪದೇ ಪದೆ ವರ್ಗಾವಣೆ ಮಾಡುವುದು, ಹೀಗೆ ವಿವಿಧ ರೀತಿಯಿಂದ ಮಾನಸಿಕ ಹಾಗೂ ಆರ್ಥಿಕವಾಗಿ ಕಿರುಕುಳ ನೀಡುತ್ತಿದೆ. ವಿವಿಯಿಂದ ನ್ಯಾಯ ದೊರೆಯದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿವಿಯ ನೌಕರ ಪಿ.ಬಿ. ಕರಮಡಿ ಎಚ್ಚರಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡ ಅವರು, ತಮ್ಮ ವಿದ್ಯಾಭ್ಯಾಸಕ್ಕೆ ತಕ್ಕಂತೆ ಇರುವ ಉದ್ಯೋಗ ನೀಡುವಂತೆ ತೋಟಗಾರಿಕಾ ವಿವಿ ಕುಲಸಚಿವರಿಗೆ ಮತ್ತು ಕುಲಪತಿಗಳಿಗೆ ಮನವಿ ಮಾಡದ್ದೆ. ಮನವಿಗೆ ಸ್ಪಂದಿಸದೆ ಮಾನಸಿಕವಾಗಿ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ ಎಂದು ದೂರಿದರು.ಕಳೆದ ಕೆಲ ದಿನಗಳ ಹಿಂದೆಯೇ ವಿವಿಯಲ್ಲಿ ವಿವಿಧ ಹುದ್ದೆಗಳಿಗೆ ಪತ್ರಿಕೆಗಳ ಮೂಲಕ ಅರ್ಜಿ ಕರೆಯಲಾಗಿತ್ತು. ಅದಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದೆ. ಆದರೆ, ತೋಟಗಾರಿಕೆ ವಿವಿಯ ಕುಲಪತಿ ದಂಡಿನ ಅವರು ನನ್ನ ಮೇಲಿನ ಸಿಟ್ಟಿನಿಂದ ಉದ್ದೇಶ ಪೂರ್ವಕವಾಗಿ ಸಂದರ್ಶನದಲ್ಲಿ ಇದ್ದ ನನ್ನ ಹೆಸರನ್ನು ತೆಗೆದು ಹಾಕಿದ್ದಾರೆ. 13 ವರ್ಷ ಸೇವೆ ಸಲ್ಲಿಸಿರುವ ನನಗೆ ಅರ್ಜಿ ಸಲ್ಲಿಸಿದರೂ ಯಾವುದೇ ರೀತಿ ಅವಕಾಶ ನೀಡುತ್ತಿಲ್ಲ. ಈ ಕುರಿತು ರಾಜ್ಯಪಾಲರಿಗೆ, ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇನೆ. ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನೌಕರ ಪಿ.ಬಿ. ಕರಮಡಿ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement