ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಔದ್ಯೋಗಿಕ ರಂಗದ ಸಮಸ್ಯೆಗೆ ಪರಿಹಾರ ಇಲ್ಲ: ಕೆಸಿಸಿಐ

Vishwanath S
Updated On : 13 Jul 2013, 11:32 am

ಹುಬ್ಬಳ್ಳಿ:  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‌ನಲ್ಲಿ ಔದ್ಯೋಗಿಕ ರಂಗ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಇಲ್ಲ ಎಂದು ಕೆಸಿಸಿಐ ಪ್ರಕಟಣೆ ತಿಳಿಸಿದೆ.  ರು. 97 ಸಾವಿರ ಕೋಟಿಗಳ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಮತ್ತು ಪರಿಶಿಷ್ಟರ ಅಭಿವೃದ್ಧಿಗೆ ಪೂರಕ ಬಜೆಟ್ ಮಂಡಿಸಿದ್ದಾರೆ. ಕೃಷಿ ಉತ್ಪಾದನೆ ಮತ್ತು ರೈತರ ರು. 2 ಲಕ್ಷ ವರೆಗಿನ ಸಾಲಕ್ಕೆ ಶೂನ್ಯ ಬಡ್ಡಿ, ಕಬ್ಬು ಖರೀದಿ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆಯನ್ನು ಪ್ರತಿ ಟನ್‌ಗೆ ರು. 20 ನಿಗದಿ ಮಾಡಿರುವ ಕ್ರಮ ಕಬ್ಬು ಬೆಳೆಗಾರರಿಗೆ ಸಂತಸ ತಂದಿದೆ.  ನಗರಾಭಿವೃದ್ಧಿಗೆ ಸರ್ಕಾರ ಕೇವಲ ರು. 9286 ಕೋಟಿ ಮೀಸಲು ಇರಿಸಲಾಗಿದೆ. ಆದರೆ, ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ನಿಖರ ಯೋಜನೆಗಳು ಬಜೆಟ್‌ನಲ್ಲಿ ಇಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಸಿಸಿಐ ಸಲ್ಲಿಸಿದ್ದ ಪ್ರಸ್ತಾವನೆಗಳಿಗೆ ಸರ್ಕಾರ ಗಮನ ನೀಡಿಲ್ಲ. ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‌ನಲ್ಲಿ ಕನಿಷ್ಠ ಈ ಬಾರಿಯಾದರೂ ಆಟೋಮೊಬೈಲ್ ವಲಯದ ಮೇಲಿನ ತೆರಿಗೆ ಬಾರ ಇಳಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಸಿದ್ದರಾಮಯ್ಯ ಅವರು ತಾವು ಮಂಡಿಸಿದ ಬಜೆಟ್‌ನಲ್ಲಿ ತೆರಿಗೆ ಬಾರ ಕಡಿಮೆ ಮಾಡುವ ಕುರಿತು ಪ್ರಸ್ತಾಪಿಸದಿರುವುದು ವಿಷಾದನೀಯ ಎಂದು ತಿಳಿಸಿದೆ.  ಜೆ.ಸಿ. ನಗರದ ಛೇಂಬರ್ ಆಫ್ ಕಾಮರ್ಸ್ ಸಭಾ ಭವನದಲ್ಲಿ ಜರುಗಿದ ಬಜೆಟ್ ಸಂವಾದ ಕಾರ್ಯಕ್ರಮದಲ್ಲಿ ಕೆಸಿಸಿಐ ಅಧ್ಯಕ್ಷ ಎನ್.ಪಿ. ಜವಳಿ, ಉಪಾಧ್ಯಕ್ಷರಾದ ಅಂದಾನಪ್ಪ ಸಜ್ಜನರ, ಮಹೇಂದ್ರ ಲದ್ದಡ, ಗೌರವ ಕಾರ್ಯದರ್ಶಿ ವಿಶ್ವನಾಥ ಗಿಣಿಮಾವ, ತೆರಿಗೆ ಉಪಸಮಿತಿ ಅಧ್ಯಕ್ಷ ವೈ.ಎಂ. ಖಟಾಂವಕರ್, ಓ.ವಿ. ಗದಗ, ವಿ.ಸಿ. ಪರ್ವತಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement