ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಾಳೆ ಹಿರಿಯ ಚೇತನಗಳಿಗೆ ಅಭಿನಂದನೆ

Vishwanath S
Updated On : 13 Jul 2013, 11:33 am

ಕನ್ನಡಪ್ರಭ ವಾರ್ತೆ, ಧಾರವಾಡ, ಜು. 12
ರತಿಕಾ ನೃತ್ಯ ನಿಕೇತನ ಭರತನಾಟ್ಯ ಶಾಲೆಯಿಂದ ಇಲ್ಲಿನ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜು. 14ರಂದು ಸಂಜೆ 5ಕ್ಕೆ ಹಿರಿಯ ಚೇತನಗಳಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆಕಾಶವಾಣಿ ಕಲಾವಿದ ಅನೀಲ ದೇಸಾಯಿ, ಹಿರಿಯ ಚೇತನಗಳಾದ ಚಂದ್ರಕಾಂತ ಬೆಲ್ಲದ, ನಾರಾಯಣ ಶೆಟ್ಟಿ, ವೀರಯ್ಯ ಹಿರೇಮಠ, ಬಸವರಾಜ ಹಾಲಬಾವಿ, ಚನ್ನಬಸಪ್ಪ ಕಗ್ಗಣ್ಣವರ, ಸೀತಾ ಶೆಟ್ಟಿ, ಮಹಾನಂದಾ ಕೊಳಕಿ, ಸರಳಾ ಕುಲಕರ್ಣಿ, ಎಸ್.ಆರ್. ಗುಂಜಾಳ, ಸಿದ್ರಾಮಪ್ಪ ಕವಳಿ, ಮಾರ್ತಾಂಡರಾವ ದಾಮೋದರ ಅವರನ್ನು ಸನ್ಮಾನಿಸಲಾಗುವುದು. ಅಲ್ಲದೇ, ಒಂದೇ ದಿನದಲ್ಲಿ 108 ನೃತ್ಯ ಬಿಲ್ವಾರ್ಚನೆ ಮಾಡಿದ ಸುಮತಾ ಎಂ.ಆರ್. ಹಾಗೂ ಸೃಷ್ಟಿ ಕುಲಕರ್ಣಿ ಅವರನ್ನು ಅಭಿನಂದಿಸಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ವಿದುಷಿ ನಾಗರತ್ನಾ ನಾಗರಾಜ ಹಡಗಲಿ ಅವರ ತಂದೆ ತಾಯಿ ಮತ್ತು ಅತ್ತೆ ಮಾವನವರ ವಿವಾಹದ 50ನೇ ವರ್ಷದ ಸುವರ್ಣ ಮಹೋತ್ಸವ ಈ ಅಭಿನಂದನಾ ಸಮಾರಂಭದಲ್ಲಿ ನಡೆಯಲಿದೆ. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಸಮಾರಂಭ ಉದ್ಘಾಟಿಸಲಿದ್ದು, ನಾಗನೂರು ರುದ್ರಾಕ್ಷಿಮಠದ ಡಾ. ಸಿದ್ದರಾಮ ಸ್ವಾಮೀಜಿ ಹಾಗೂ ಅಥಣಿ ಮೋಠಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಶಾಸಕರಾದ ವಿನಯ ಕುಲಕರ್ಣಿ, ಅರವಿಂದ ಬೆಲ್ಲದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಡಿ. ಹಿರೇಗೌಡರ, ಜ್ಞಾನ ಮಂದಾರ ಶೈಕ್ಷಣಿಕ ಸಂಸ್ಥೆ ಅಧ್ಯಕ್ಷ ಎಚ್. ಸೋಮಶೇಖರ, ಜಾನಪದ ತಜ್ಞ ಶ್ರೀಶೈಲ ಹುದ್ದಾರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ರತಿಕಾ ನೃತ್ಯ ನಿಕೇತನ ಭರತನಾಟ್ಯ ಶಾಲೆಯ ವಿದ್ಯಾರ್ಥಿನಿಯರು ನೃತ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ನಾಗರಾಜ ಹಡಗಲಿ ಮತ್ತು ನಾಗರತ್ನಾ ಹಡಗಲಿ ಸುದ್ದಿಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement