ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪ್ರಗತಿದಾಯಕ ಬಜೆಟ್: ಪ್ರಸಾದ

Vishwanath S
Updated On : 13 Jul 2013, 11:31 am

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ವೈಫೈ ಪೈಲಟ್ ಯೋಜನೆಯನ್ನು ವಿಸ್ತರಿಸಿರುವುದು ಹಾಗೂ ಧಾರವಾಡದಲ್ಲಿ ಐಐಐಟಿ ಕೇಂದ್ರ ಸ್ಥಾಪನೆಗೆ ರು. 45 ಕೋಟಿ ಮೀಸಲಿರಿಸಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವಳಿ ನಗರದ ಬಗ್ಗೆ ಹೊಂದಿರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಇದು ಪ್ರಗತಿದಾಯಕ ಬಜೆಟ್ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಅಭಿಪ್ರಾಯ ಪಟ್ಟಿದ್ದಾರೆ.  ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೊಬೈಲ್ ಮಾಹಿತಿ ತಂತ್ರಜ್ಞಾನವನ್ನು ಪ್ರಾಥಮಿಕ ಶಾಲಾ ಮಟ್ಟದಲ್ಲಿ ಒದಗಿಸುವ ನಿರ್ಧಾರ, ಮಹಿಳಾ ಶಿಕ್ಷಣಕ್ಕೆ ಒತ್ತು ನೀಡುವ ದಿಸೆಯಲ್ಲಿ ವಿದ್ಯಾರ್ಥಿನಿಯರ ಶಾಲಾ ಹಾಜರಾತಿ ಹೆಚ್ಚಿಸಲು ಪ್ರತಿದಿನ ರು. 2 ಪ್ರೋತ್ಸಾಹ ಧನ, ಹಾಸ್ಟೆಲ್ ಪ್ರವೇಶ ದೊರೆಯದ 20 ಸಾವಿರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರು. 1500 ಸಾವಿರ ಸಹಾಯ ಧನದಂತಹ ಕೊಡುಗೆ ನೀಡಿದ್ದು ಸ್ವಾಗತಾರ್ಹ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ನಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಉಪಯೋಗವಾಗಲಿದೆ. ರೈತರಿಗೆ ಶೂನ್ಯ ಬಡ್ಡಿದರ ಮತ್ತು ರಿಯಾಯಿತಿ ಬಡ್ಡಿದರದ ಸಾಲದಿಂದ ಕೃಷಿಕರಿಗೆ ನೆರವಾಗಲಿದೆ. ಅದೇ ರೀತಿ ಶಿಕ್ಷಣ ನಗರಿ ಧಾರವಾಡದಲ್ಲಿ ಐಐಟಿ ಸ್ಥಾಪಿಸುವುದಕ್ಕೆ ರು. 40 ಕೋಟಿ ಮೀಸಲು ಇರಿಸಿರುವ ಮೂಲಕ ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಗೆ ಸಿದ್ದರಾಮಯ್ಯ ಮುನ್ನುಡಿ ಬರೆದಿದ್ದಾರೆ.
- ಕುಶಾಲ್ ಡಂಕ
ಬಜೆಟ್‌ನಲ್ಲಿ ಹೇಳಿಕೊಳ್ಳುವಂತಹದ್ದು ಏನು ಇಲ್ಲ. ಕೈಗಾರಿಕೆಗಳಿಗೆ ಉತ್ತೇಜನ ನೀಡುವುದಕ್ಕೆ ಕ್ರಮ ತೆಗೆದುಕೊಳ್ಳಬೇಕಿದ್ದ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಈ ಕುರಿತು ಪ್ರಸ್ತಾಪ ಮಾಡದಿರುವುದು ರಾಜ್ಯದ ಅರ್ಥ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ. ಒಂದು ರು. ಕೆಜಿ ಅಕ್ಕಿ ಯೋಜನೆಗೆ ಸಂಪನ್ಮೂಲ ಕ್ರೋಢೀಕರಿಸುವುದಕ್ಕೆ ಮುಖ್ಯಮಂತ್ರಿ ಆದ್ಯತೆ ನೀಡಬೇಕಿತ್ತು.
- ಕಿರಣ್ ಹಿರೇಮಠ
ಧಾರವಾಡ ಗ್ರಾಮೀಣ ಜಿಲ್ಲಾ ಜೆಡಿಎಸ್ ಅಧ್ಯಕ್ಷ
ರಾಜ್ಯದಲ್ಲಿ ತೆರಿಗೆ ಭಾರ ಅತಿಯಾಗಿದ್ದು, ತೆರಿಗೆ ಭಾರ ಕಡಿಮೆ ಮಾಡಿದ್ದರೆ ಉದ್ಯಮ ಕ್ಷೇತ್ರಕ್ಕೆ ಒಳ್ಳೆಯದಾಗುತ್ತಿತ್ತು. ಆದರೆ, ಸರ್ಕಾರ ಯೋಜನೇತರ ಬಾಬ್ತಿನಲ್ಲಿ ಹೆಚ್ಚು ವೆಚ್ಚ ಮಾಡುವುದಕ್ಕೆ ಆದ್ಯತೆ ನೀಡಿದೆ. ಇದರಿಂದ ರಾಜ್ಯದ ವಿತ್ತೀಯ ಕೊರತೆ ಇನ್ನೂ ಹೆಚ್ಚಾಗಲಿದೆ. ರಾಜ್ಯದ ಸಾಮಾನ್ಯ ಜನರಿಗೆ ತೆರಿಗೆ ಭಾರ ಆಗಬಾರದು.
- ವೀರಣ್ಣ ಅಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement