ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬಜೆಟ್‌ನಲ್ಲಿ ಉ.ಕ.ಕ್ಕೆ ಆದ್ಯತೆ: ಸ್ವಾಗತಾರ್ಹ

Vishwanath S
Updated On : 13 Jul 2013, 11:32 am

ಹುಬ್ಬಳ್ಳಿ:  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡಿರುವುದು ಸ್ವಾಗತಾರ್ಹ ಎಂದು ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಪಂಗಡಗಳ ವಿಭಾಗದ ಅಧ್ಯಕ್ಷ ಟಿ. ಈಶ್ವರ ಹೇಳಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಹಿತ ಬಜೆಟ್‌ನಲ್ಲಿ ಅಡಗಿದೆ. ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೆ ವಿಶೇಷ ಕಾರ್ಯಕ್ರಮ ಹಾಗೂ ಪರಿಶಿಷ್ಟರಿಗೆ ಶೇ. 18 ಮೀಸಲಾತಿ ಕಡ್ಡಾಯ, ನೀರಾವರಿಗೆ ಮೀಸಲಿಟ್ಟ ಹಣದ ಪ್ರಮಾಣಕ್ಕೆ ಪ್ರಾಧಾನ್ಯ ನೀಡಿರುವುದು ಸಂತಸ ತಂದಿದೆ ಎಂದರು.  ಇದು ಜನಮೆಚ್ಚುವ ಬಂಪರ್ ಬಜೆಟ್. ಡೀಸೆಲ್ ಮೇಲಿನ ಸೆಸ್ ಕಡಿಮೆ ಮಾಡಿರುವುದು ದಿಟ್ಟ ಕ್ರಮ. ದುರ್ಬಲ ವರ್ಗದವರ ಸಾಲ ಮನ್ನಾ, ಶ್ರೀಸಾಮಾನ್ಯರಿಗೆ ರಕ್ಷಣೆ, ಬಡವರಿಗೆ ಸೂರು, ಉತ್ತಮ ರಸ್ತೆ, ಶಿಕ್ಷಣಕ್ಕೆ ಆದ್ಯತೆ, ನೇಕಾರರಿಗೆ ರು. 100 ಕೋಟಿಗಳ ಪ್ಯಾಕೇಜ್ ಮತ್ತಿತರ ಘೋಷಣೆಗಳು ಸರ್ಕಾರಕ್ಕಿರುವ ಜನಪರ ಕಾಳಜಿಯನ್ನು ತೋರಿಸುತ್ತದೆ ಎಂದು ಹೇಳಿದರು. ಮಧ್ಯಮ ವರ್ಗದವರಿಗೆ ಹಾಗೂ ಬಡವರಿಗೆ ಹೊರೆಯಾಗದ ಬಜೆಟ್ ಇದಾಗಿದ್ದು, ತೆರಿಗೆ ಸೋರಿಕೆ ತಡೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ವಿಭಾಗದ ಡಿ.ಎಂ. ಅಶೋಕ, ಪ್ರಕಾಶ ಹಳ್ಯಾಳ ಹಾಗೂ ಮಾರುತಿ ಬಾರಕೇರ ಹಾಜರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement