ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಶಿವರಾಜಕುಮಾರ ಜನ್ಮದಿನ: ನೇತ್ರದಾನದ ಘೋಷಣೆ

Vishwanath S
Updated On : 13 Jul 2013, 11:34 am

ಕಲಘಟಗಿ: ತಾಲೂಕಿನ ಹಿರೇಹೊನ್ನಳ್ಳಿಯಲ್ಲಿ 25ಕ್ಕೂ ಹೆಚ್ಚು ಜನರು ನೇತ್ರದಾನ ಮಾಡುವದಾಗಿ ನಿರ್ಧರಿಸಿದರು.
ಶುಕ್ರವಾರ ಮಧ್ಯಾಹ್ನ ನಟ ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಅಲ್ಲಿನ ಡಾ. ರಾಜ್‌ಕುಮಾರ ಕನ್ನಡ ಸಾಂಸ್ಕೃತಿಕ ವೇದಿಕೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಸಂಯುಕ್ತಾಶ್ರಯದಲ್ಲಿ ನೇತ್ರದಾನ ಶಿಬಿರ ಏರ್ಪಡಿಸಲಾಗಿತ್ತು. ಜಿಪಂ ಸದಸ್ಯ ವೈ.ಬಿ. ದಾಸನಕೊಪ್ಪ ಮಾತನಾಡಿ, ಅಂಧರ ಬಾಳಿಗೆ ದೀಪ ಬೆಳಗುವ ನೇತ್ರದಾನದಂತಹ ಶಿಬಿರಗಳಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಎಸ್. ಬೆಳ್ಳಿವಾಲೆ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಮಾದಿ, ಶಂಕರಲಿಂಗ ಕೆಲಗೇರಿ, ಬಸಪ್ಪ ಜಮ್ಮಿಹಾಳ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಚನ್ನಪ್ಪ ಜಮ್ಮಿಹಾಳ, ಅಡಿವೆಪ್ಪ ಪುರದನ್ನವರ, ಚಂದ್ರಪ್ಪ ಪಟ್ಟಣಶೆಟ್ಟಿ, ಪ್ರಭು ರಂಗಾಪುರ, ಬಸವರಾಜ ಗಬ್ಬೂರ, ಶಂಕರ ಹೊಸಮನಿ, ಬಸಪ್ಪ ಓಲೆಕಾರ, ಬಸವರಾಜ ದೇಸೂರ, ಫಕ್ಕೀರೇಶ ಕೆಲಗೇರಿ, ಈರಪ್ಪ ಧನಿಗೊಂಡ, ರವೀಂದ್ರ ಬಡಿಗೇರ, ಗಿರಿಮಲ್ಲಯ್ಯ ಕಂಬಿ, ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement