ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪ್ರೊಬಸ್ ಕ್ಲಬ್ ಅಧಿಕಾರಿಗಳ ಪದಗ್ರಹಣ

Vishwanath S
Updated On : 14 Jul 2013, 12:19 pm

ಹುಬ್ಬಳ್ಳಿ: ಆರೋಗ್ಯದ ಬಗ್ಗೆ ಕಾಳಜಿ, ಹಿತಮಿತ ಆಹಾರ ಸೇವನೆ, ಓದು, ಮನರಂಜನೆಯ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗುವಿಕೆಯಿಂದ ನೆಮ್ಮದಿ ಜೀವನ ಸಾಧ್ಯ ಎಂದು ಕರ್ನಾಟಕ ವಿವಿ ಮನಃಶಾಸ್ತ್ರ ವಿಭಾಗದ ವಿಶ್ರಾಂತ ಮುಖ್ಯಸ್ಥ ಡಾ. ಪಿ.ಎಸ್. ಹಲ್ಯಾಳ ಹೇಳಿದರು.
ಇಲ್ಲಿನ ಲಿಂಗರಾಜನಗರದ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಜರುಗಿದ ಪ್ರೊಬಸ್ ಕ್ಲಬ್ ನೂತನ ಅಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೂತನ ಪದಾಧಿಕಾರಿಗಳಾಗಿ ಪ್ರೊ. ಎನ್.ಎಸ್. ಮುಶಣ್ಣವರ (ಅಧ್ಯಕ್ಷ), ಜೆ.ವಿ. ಹಿರೇಮಠ (ಉಪಾಧ್ಯಕ್ಷ), ಆರ್.ಜಿ. ಹೊಸೂರ (ಕಾರ್ಯದರ್ಶಿ), ಎಂ.ಎ. ಕಂಕನವಾಡಿ (ಖಜಾಂಚಿ) ಮತ್ತು ಆರು ಜನ ನಿರ್ದೇಶಕರುಗಳಿಗೆ ರೋಟರಿ ಕ್ಲಬ್ ಉತ್ತರ ವಲಯದ ಅಧ್ಯಕ್ಷ ರಾಮಮೋಹನ್ ಪ್ರಮಾಣ ವಚನ ಬೋಧಿಸಿ ಅಧಿಕಾರ ಹಸ್ತಾಂತರಿಸಿದರು.
ನೂತನ ಅಧ್ಯಕ್ಷ ಪ್ರೊ. ಎನ್.ಎಸ್. ಮುಶಣ್ಣವರ ಪ್ರಸಕ್ತ ಸಾಲಿನ ಕಾರ್ಯ ಯೋಜನೆಗಳ ವಿವರ್ನ ನೀಡಿದರು. ಇದೇ ಸಂದರ್ಭ75 ವರ್ಷ ಪೂರೈಸಿದ ಕ್ಲಬ್‌ನ ಸದಸ್ಯರಿಗೆ ಸನ್ಮಾನಿಸಲಾಯಿತು. ಡಾ. ಎಸ್.ಆರ್. ತೆಗ್ಗಿನಮನಿ ಸ್ವಾಗತಿಸಿದರು. ಪ್ರೊ.ಜಿ.ಯು. ಬಸವರಾಜ ನಿರೂಪಿಸಿದರು. ಕಾರ್ಯದರ್ಶಿ ಆರ್.ಜಿ. ಹೊಸೂರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement