ಬಡವರನ್ನು ಮುಖ್ಯವಾಹಿನಿಗೆ ತನ್ನಿ
ಹುಬ್ಬಳ್ಳಿ: ಕೆಳಹಂತದಲ್ಲಿ ಜೀವನ ನಡೆಸುತ್ತಿರುವ ನಿರ್ಗತಿಕರು ಹಾಗೂ ಬಡವರಿಗೆ ಸಹಾಯ ಮಾಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು ಎಂದು ಉತ್ತರ ಪ್ರದೇಶದ ಕಚೂಚಿ ಶರೀಫ್ ದರ್ಗಾದ ಹಜರತ್ ಸೈಯದ್ ಮಹ್ಮದಅಶ್ರಫ ಅಶ್ರಫಿ ಜಿಲಾನಿ ಹೇಳಿದರು.
ಇಲ್ಲಿಯ ಗಣೇಶಪೇಟದಲ್ಲಿರುವ ಶಹರ ಮುಖ್ಯ ಖಾಜಿ ಮೌಲಾನಾ ಅಲಹಜ್ ಜಹಿರುದ್ದೀನ್ ಖಾಜಿ ಏರ್ಪಡಿಸಿದ್ದ ಮುಸ್ಲಿಂ ಮೆಕ್ಕಾ ಮದಿನಾ ಯಾತ್ರೆಗೆ ಹೋಗಲು ಮಾಹಿತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಖಾಜಿ ಮೌಲಾನಾ ಅಲಹಜ್ ಜಹೀರುದ್ದೀನ ಖಾಜಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ, ಬಾಬಾಜಾನ ಮುಧೋಳ, ನಜೀರಅಹ್ಮದ ಕೋಲಕಾರ, ಮುನ್ನಾ ವಡ್ಡು, ಹಾಫೀಜ ಮುಕ್ತಾರ ಮತ್ತಿತರರು ಹಾಜರಿದ್ದರು.