ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ರೋಟರಿ ಪದಾಧಿಕಾರಿಗಳ ಪದಗ್ರಹಣ

Vishwanath S
Updated On : 14 Jul 2013, 12:18 pm

ಹುಬ್ಬಳ್ಳಿ: ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತಹ ರೋಟರಿ ಸದಸ್ಯರ ಸಂಖ್ಯೆ ಹೆಚ್ಚಾಗಬೇಕು ಎಂದು ಇಎನ್‌ಟಿ ತಜ್ಞ ರೋಟರಿ ಸದಸ್ಯ ಡಾ. ಪಿ.ವಿ. ದತ್ತಿ ಹೇಳಿದರು.
ಇಲ್ಲಿನ ದೇಶಪಾಂಡೆ ನಗರದ ರೋಟರಿ ಶಾಲೆಯಲ್ಲಿ ಈಚೆಗೆ ಏರ್ಪಡಿಸಿದ್ದ ರೋಟರಿ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಉತ್ತರಾಖಂಡದ ಸಂತ್ರಸ್ತರಿಗಾಗಿ ರಾತ್ರಿಹಗಲು ಎನ್ನ್ನದೇ ದುಡಿಯುತ್ತಿರುವ ಭಾರತದ ಯೋಧರಿಗಾಗಿ ಪ್ರತಿಯೊಬ್ಬ ರೋಟರಿ ಸದಸ್ಯರು ಧನ ಸಹಾಯ ಮಾಡಬೇಕು ಎಂದರು. ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಹಾದೇವ ಕರಮರಿ, ಮುಂಬರುವ ದಿನಗಳಲ್ಲಿ ರೋಟರಿ ಸಂಸ್ಥೆ ಸರಳ ಕಾರ್ಯಕ್ರಮ ಆಯೋಜಿಸುವ ಮೂಲಕ ಉಳಿತಾಯ ಮಾಡಿದ ಹಾಗೂ ದೇಣಿಗೆಯಿಂದ ಬಂದ ಹಣವನ್ನು ಉತ್ತರಾಖಂಡದ ಸಂತ್ರಸ್ತರಿಗೆ ಕಳುಹಿಸಲಾಗುವುದು ಎಂದರು. ಮೋಹನ ತೆಂಗಿನಕಾಯಿ, ವಿಜಯ್ ಪೈಕೋಟಿ, ಜಗದೀಶ ಮಠದ, ನರೇಂದ್ರ ಬರವಾಲ್, ರಿಯಾಜ್ ಬಸರಿ, ಗಿರೀಶ್ ಉಪಾಧ್ಯಾಯ, ಮಾಣಿಕ ಹಂಚಾಟೆ, ಕಿಶೋರ್ ಗಾಮಿ, ಶೇಷಗಿರಿ ಕುಲಕರ್ಣಿ, ಡಾ. ಬಿ.ಎಲ್. ಪಾಟೀಲ, ಎಂ.ಕೆ. ಪೈಕೋಟಿ, ವಿಜಯಲಕ್ಷ್ಮಿ ಕಟ್ಟಿಮಠ, ಸವಿತಾ ಕರಮರಿ, ಅನಘಾ ಲಿಮಯೆ ಇದ್ದರು. ನಿರ್ಗಮಿತ ಅಧ್ಯಕ್ಷ ಬಿ.ಬಿ. ಪಾಟೀಲ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement