ಬಜೆಟ್‌ಗೆ ವಿಷಾದ
ಧಾರವಾಡ: ಹುಬ್ಬಳ್ಳಿ- ಧಾರವಾಡ ಅವಳಿ ನಗರಗಳು ರಾಜ್ಯದ ಬೆಂಗಳೂರಿನ ನಂತರ ಅತೀ ದೊಡ್ಡ ನಗರಗಳು. ಆದರೆ, ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಅವಳಿ ನಗರದ ಮೂಲಸೌಕರ್ಯದ ಅಭಿವೃದ್ಧಿಗೆ ಹಣ ಒದಗಿಸದಿರುವುದು ವಿಷಾದನೀಯ ಎಂದು ಹು-ಧಾ ಮಹಾನಗರ ಅಭಿವೃದ್ಧಿ ಸಂಘವು ಅಭಿಪ್ರಾಯಿಸಿದೆ. ಪತ್ರಿಕಾ ಪ್ರಕಟಣೆ ಮೂಲಕ ಸಂಘದ ವಿಠ್ಠಲ ಕಮ್ಮಾರ, ಈ ಹಿಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪಾಲಿಕೆಗೆ ನೀಡಿದ್ದ ಅನೇಕ ಕೊಡುಗೆಗಳನ್ನು ಬಜೆಟ್‌ನಲ್ಲಿ ಕಿತ್ತುಕೊಂಡಿದ್ದಾರೆ. ಹಿಂದಿನ ಸರ್ಕಾರ ಬಜೆಟ್‌ನಲ್ಲಿ ಪಾಲಿಕೆಗೆ ಘನತ್ಯಾಜ್ಯ ನಿರ್ವಹಣೆಗೆ ನೀಡಿದ್ದ ನೂರು ಕೋಟಿ ರುಪಾಯಿಗಳನ್ನು, ಧಾರವಾಡ ಈಜುಗೊಳ ಅಭಿವೃದ್ಧಿಗಾಗಿ ತಲಾ 7.5 ಕೋಟಿ ಹಂಚಿಕೆ ಮಾಡಿತ್ತು. ಅಲ್ಲದೇ, ನಿರಂತರ ನೀರು ಯೋಜನೆಗೆ ಹಣ ತೆಗೆದಿರಿಸಲಾಗಿತ್ತು. ಆದರೆ, ಈ ಯೋಜನೆಗಳನ್ನು ಕೈ ಬಿಟ್ಟಿರುವುದು ಅವಳಿ ನಗರದ ಜನತೆಗೆ ನಿರಾಸೆ ಉಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.