ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅನಧಿಕೃತ ಜಾಹೀರಾತು ಫಲಕ ತೆರವು

Lingaraj Badiger
Updated On : 16 Jul 2013, 11:29 am

ಹುಬ್ಬಳ್ಳಿ: ನಗರದ ಚನ್ನಮ್ಮ ವೃತ್ತದ ಬಳಿಯ ಅನಧಿಕೃತ ಜಾಹೀರಾತು ಫಲಕಗಳನ್ನು ಸೋಮವಾರ ಮಹಾನಗರ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದರು. ಜಾಹೀರಾತು ಫಲಕಗಳ ಪ್ರದರ್ಶನದ ನಿಗದಿತ ಅವಧಿ ಮುಗಿದಿದ್ದರೂ, ಶುಲ್ಕ ಮರುಪಾವತಿಸಿ ಅವಧಿ ನವೀಕರಿಸಿಗೊಳ್ಳದ 3 ಜಾಹೀರಾತು ಫಲಕಗಳನ್ನು ಅಧಿಕಾರಿಗಳು ತೆರವುಗೊಳಿಸಿದರು. ಜಾಹೀರಾತು ಫಲಕಗಳ ಅವಧಿ ನವೀಕರಿಸದ ಅನೇಕ ಫಲಕಗಳು ನಗರದಲ್ಲಿದ್ದು, ಹಂತ ಹಂತವಾಗಿ ಅವುಗಳನ್ನು ತೆರವುಗೊಳಿಸುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಎಚ್ಚರಿಕೆ: ನಗರದ ವಿವಿಧ ಬಸ್ ಶೆಲ್ಟರ್‌ಗಳಲ್ಲಿ ಅಳವಡಿಸಿರುವ ಅವಧಿ ಮುಗಿದ ಜಾಹೀರಾತು ಫಲಕಗಳನ್ನೂ ತೆರವುಗೊಳಿಸುವುದಾಗಿ ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅವಧಿ ಮುಗಿದ ಸರ್ ಸಿದ್ದಪ್ಪ ಕಂಬಳಿ ರಸ್ತೆಯ ಬಸ್ ಶೆಲ್ಟರ್‌ನಲ್ಲಿನ ಜಾಹೀರಾತುಗಳನ್ನು ಪಾಲಿಕೆ ಅಧಿಕಾರಿಗಳು ಮಂಗಳವಾರ ತೆರವುಗೊಳಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement