ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಆರೋಗ್ಯ ಕೇಂದ್ರಗಳಿಗೆ ಔಷಧ ನೀಡಿ

Lingaraj Badiger
Updated On : 16 Jul 2013, 11:29 am

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಜು. 15
ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ಸಮರ್ಪಕವಾಗಿ ಔಷಧಗಳನ್ನು ಒದಗಿಸಿ ಬಡವರಿಗೆ ಆರೋಗ್ಯ ಸೇವೆ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಹಾಗೂ  ಆರೋಗ್ಯ ಸಚಿವರನ್ನು ಮನವಿ ಸಲ್ಲಿಸಿದರು.
ಕರವೇ ತಾಲೂಕು ಘಟಕದ ಅಧ್ಯಕ್ಷ ಗಿರೀಶ ಬಾರ್ಕಿ ಮಾತನಾಡಿ, ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ಔಷಧ ವಿತರಣೆ ಮಾಡಲಾಗುತ್ತಿದೆ ಎಂದು ನಾಮಫಲಕ ಮತ್ತು ಜಾಹೀರಾತು ಪ್ರಕಟಿಸುತ್ತಾರೆ. ನೈಜ ಸಂಗತಿ ನೋಡಿದಾಗ ಸರ್ಕಾರಿ ಆರೋಗ್ಯ ಕೇಂದ್ರಗಳಿಲ್ಲಿ ಎಷ್ಟು ರೋಗಿಗಳನ್ನು ದಾಖಲಾಗುತ್ತಾರೆ ಎಷ್ಟು ಗುಳಿಗೆಗಳನ್ನು ವಿತರಿಸಲಾಗಿದೆ ಎಂದು ಗಮನಹರಿಸದೆ ಇರುವುದರಿಂದ ನೆಪ ಮಾತ್ರಕ್ಕೆ ಕೇವಲ ಕೆಲವರಿಗೆ ಔಷಧ ನೀಡುತ್ತಾರೆ. ಇನ್ನು ಕೆಲ ಬಡರೋಗಿಗಳಿಗೆ ಇಲ್ಲಿ ನಿಮಗೆ ಬೇಕಾದ ಔಷಧ ಲಭ್ಯವಿಲ್ಲ ಎಂದು ಉತ್ತರ ನೀಡಿ, ಖಾಸಗಿ ಔಷಧ ಅಂಗಡಿಗಳಲ್ಲಿ ತರಿಸುವ ಮೂಲಕ ಬಡವರಿಗೆ ಸರ್ಕಾರ ವಿತರಿಸಿದ ಔಷಧಗಳು ವರೀಚಿಕೆಯಾಗಿವೆ. ಬಡವರು ವೈದ್ಯಾಧಿಕಾರಿಗಳಿಗೆ ಲಂಚ ನೀಡಿದರೆ ಅವರಿಗೆ ಔಷಧ ನೀಡುತ್ತಾರೆ.  ಇದು ಕೂಡ ದುಬಾರಿ ಬೆಲೆಯಲ್ಲಿ ಆರೋಗ್ಯ ಸೇವೆ ನೀಡಿದಂತಾಗುತ್ತಿದೆ ಎಂದು ದೂರಿದರು. ಸರ್ಕಾರ ಎಲ್ಲ ಆಸ್ಪತ್ರೆಗಳಿಗೂ ಸಮರ್ಪಕವಾಗಿ ಔಷಧಗಳನ್ನು ಪೂರೈಸಿ ಎಲ್ಲ ಕಡು ಬಡವರಿಗೂ ಔಷಧಗಳು ಸುಲಭವಾಗಿ ಸಿಗುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಎಲ್ಲ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಎದುರು ಉಗ್ರವಾಗಿ ಪ್ರತಿಭಟನೆ  ಮಾಡುವುದಾಗಿ ಎಚ್ಚರಿಸಿದರು. ಈ ಕುರಿತ ಮನವಿಯನ್ನು ತಹಸೀಲ್ದಾರ್ ಚುಷಾರ ಹೊಸೂರ ಮೂಲಕ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರಿಗೆ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಗಿರೀಶ ಬಾರ್ಕಿ, ಜಿಲ್ಲಾ ವಕ್ತಾರ ಶಿವಾನಂದ ಪೂಜಾರ, ರಟ್ಟಿಹಳ್ಳಿ ಕರವೇ ಅಧ್ಯಕ್ಷ ಮಂಜುನಾಥ ಮುದಿಯಪ್ಪನವರ, ಮಲ್ಲಿಕಾಜು ರ್ನ ಶಿರಹಟ್ಟಿ, ಬಿ.ಎಚ್. ಬಣಕಾರ, ಪ್ರದೀಪ ಬಣಕಾರ, ಕಲ್ಲನಗೌಡ ಕರೇಗೌಡ್ರ, ಮಂಜುನಾಥ ಆರಿಕಟ್ಟಿ, ಬೂದೇಶಿ ಹರಿಜನ, ಕಲ್ಲೇಶ ಸುಣಗಾರ, ರಾಮಣ್ಣ ಕಡೂರ, ಮಲ್ಲೇಶ ಹೊಟ್ಟೇರ, ರಾಘು  ಉಜ್ಜಪ್ಪಳವರ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement