ಸೆ. 21ರಿಂದ ಕೃಷಿಮೇಳ
ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸೆ. 21ರಿಂದ 24ರವರೆಗೆ 'ಕೃಷಿ ಮೇಳ-2013' ಆಯೋಜಿಸಲಾಗಿದೆ. ರೈತರು, ರೈತ ಮಹಿಳೆಯರು, ಕೃಷಿಯಲ್ಲಿ ನಿರತ ಸಂಘ-ಸಂಸ್ಥೆಗಳು, ಶಾಲಾ ಮಕ್ಕಳು, ಪರಿಕರ ವಿತರಕರು ಹಾಗೂ ವಿಸ್ತರಣಾ ಕಾರ್ಯಕರ್ತರು ಕೃಷಿ ಮೇಳದ ಸದುಪಯೋಗಪಡೆದುಕೊಳ್ಳುವಂತೆ ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಹಾಗೂ ಕೃಷಿ ಮೇಳದ ಅಧ್ಯಕ್ಷ ಡಾ. ಎಲ್. ಕೃಷ್ಣ ನಾಯಕ ಕೋರಿದ್ದಾರೆ.
ಬ್ಯಾಡ್ಮಿಂಟನ್ ಪಂದ್ಯ
ಧಾರವಾಡ: ನಗರದ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಹಯೋಗದೊಂದಿಗೆ ಆ. 3 ಮತ್ತು 4ರಂದು ಇಲ್ಲಿಯ ಎಸ್ಡಿಎಂ ದಂತ ವೈದ್ಯಕೀಯ ಕಾಲೇಜಿನ ಬ್ಯಾಡ್ಮಿಂಟನ್ ಸಭಾಂಗಣದಲ್ಲಿ ಎಂ.ಎಲ್. ಜೋಶಿ ಬ್ಯಾಡ್ಮಿಂಟನ್ ಟೂರ್ನಾಮೆಂಟ್ ಆಯೋಜಿಸಲಾಗಿದೆ. ಎಂ.ಎಲ್. ಜೋಶಿಯವರ ಸ್ಮರಣಾರ್ಥ ಶಶಿಕಲಾ ಜೋಶಿ ಹಾಗೂ ಮಿತ್ರರು ಜಂಟಿಯಾಗಿ ಈ ರಾಜ್ಯ ಮಟ್ಟದ ಮುಕ್ತ ಬ್ಯಾಡ್ಮಿಂಟನ್ ಟೂರ್ನಾಮೆಂಟ್ ಆಯೋಜಿಸಿದ್ದಾರೆ. ಪುರುಷರಿಗಾಗಿ ಸಿಂಗಲ್ಸ್ ಮತ್ತು ಡಬಲ್ಸ್ (30 ವರ್ಷ ಮತ್ತು ಮೇಲ್ಪಟ್ಟವರ ವಿಭಾಗ ಹಾಗೂ 45 ವರ್ಷ ಮತ್ತು ಮೇಲ್ಪಟ್ಟವರ ವಿಭಾಗ) ಮತ್ತು ಮಹಿಳೆಯರಿಗೆ ಸಿಂಗಲ್ಸ್ (30 ವರ್ಷದಿಂದ 45 ವರ್ಷ) ಸ್ಪರ್ಧೆಗಳು ನಡೆಯಲಿವೆ. ಹೆಸರು ನೋಂದಾಯಿಸಲು ಜು. 31 ಕೊನೆಯ ದಿನ. ಮಾಹಿತಿಗೆ ಶಶಿಕಲಾ ಜೋಶಿ (ಮೊ 9036487581), ಕಿರಣ್ಕೊನೇರಿ (9243240333) ಅಥವಾ ಅನಂತ ಕುಲಕರ್ಣಿ (9611758698) ಅವರನ್ನು ಸಂಪರ್ಕಿಸಲು ಕೋರಲಾಗಿದೆ.