ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಆಡಳಿತಕ್ಕಿಲ್ಲ ಹತೋಟಿ: ನಗರವೀಗ ಕಸದ ತೊಟ್ಟಿ

Lingaraj Badiger
Updated On : 17 Jul 2013, 11:40 am

ಹುಬ್ಬಳ್ಳಿ:  ಸ್ವಚ್ಛ ಹಾಗೂ ಸುಂದರ ನಗರವಾಗಬೇಕಿದ್ದ ಹುಬ್ಬಳ್ಳಿ-ಧಾರವಾಡ ಕಳೆದ ಕೆಲ ತಿಂಗಳುಗಳಿಂದ ಕಸದ ತೊಟ್ಟಿಯಂತಾಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿದ್ದಾಗ ನಿತ್ಯವೂ ರಸ್ತೆ ಬದಿಯ ಕಸ ಸ್ವಚ್ಛಗೊಳಿಸಲಾಗುತ್ತಿತ್ತು. ಆದರೆ, ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದು ತಿಂಗಳುಗಳೇ ಗತಿಸಿದ್ದರೂ ಮೇಯರ್-ಉಪ ಮೇಯರ್ ಮೀಸಲಾತಿ ಪ್ರಕಟಗೊಳ್ಳದ ಕಾರಣ ಪಾಲಿಕೆಯಲ್ಲಿ ನೂತನ ಚುನಾಯಿತ ಆಡಳಿತ ಅಧಿಕಾರಕ್ಕೆ ಬಂದಿಲ್ಲ. ಈ ಮಧ್ಯೆ ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ ವರ್ಗಾವಣೆಗೊಂಡಿದ್ದು, ಇಲ್ಲಿವರೆಗೆ ನೂತನ ಆಯುಕ್ತರನ್ನು ನೇಮಕಗೊಳಿಸುವಲ್ಲಿ ಸರ್ಕಾರ ಮುಂದಾಗಿಲ್ಲ. ಇತ್ತ ಕಡೆ ಚುನಾಯಿತ ಪ್ರತಿನಿಧಿಗಳ ಆಡಳಿತವೂ ಇಲ್ಲದೇ, ಮತ್ತೊಂದೆಡೆ ಆಯುಕ್ತರೂ ಇಲ್ಲದೇ ಪಾಲಿಕೆಯಲ್ಲಿ ಆಡಳಿತ ಸಂಪೂರ್ಣವಾಗಿ ವಿಫಲಗೊಂಡಿರುವುದಕ್ಕೆ ಈ ಕಸದ ರಾಶಿಯೇ ಸಾಕ್ಷಿ. ಮನೆಗಳಿಂದ ಕಸ ಎತ್ತುವ ಕಾರ್ಯ ಸಮರ್ಪಕವಾಗಿ ನಡೆದಿದೆಯಾದರೂ, ರಸ್ತೆ ಪಕ್ಕ ಬಿದ್ದಿರುವ ಕಸ ತೆಗೆಯುವಲ್ಲಿ ನಿರ್ಲಕ್ಷ ಎದ್ದು ಕಾಣುತ್ತಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿತನದಿಂದಾಗಿ ಅವಳಿ ನಗರದ ರಸ್ತೆಗಳು ಕಸದ ತೊಟ್ಟಿಯಂತಾಗಿವೆ.
  ಹುಬ್ಬಳ್ಳಿ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಕಸದ ರಾಶಿಯ ಛಾಯಾಚಿತ್ರಗಳನ್ನು 'ಕನ್ನಡಪ್ರಭ' ಛಾಯಾಗ್ರಾಹಕ ಡಿ. ಹೇಮಂತ ಕ್ಲಿಕ್ಕಿಸಿದ್ದಾರೆ. ಈ ಕಸದ ರಾಶಿ ತೆಗೆದು, ಅವಳಿ ನಗರವನ್ನು ಸ್ವಚ್ಛವಾಗಿಡಲು ಪಾಲಿಕೆ ಅಧಿಕಾರಿಗಳು ಇನ್ನಾದರೂ ಕ್ರಮ ಕೈಗೊಳ್ಳುವರೇ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement