ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಧಾರವಾಡ: 10 ಮಕ್ಕಳು ದತ್ತು ಪಡೆದ ಎಸ್‌ಬಿಐ ಗೆಳೆಯರು

Lingaraj Badiger
Updated On : 18 Jul 2013, 11:55 am

ಧಾರವಾಡ: ಭಾರತೀಯ ಸ್ಟೇಟ್ ಬ್ಯಾಂಕ್‌ನ ಗೆಳೆಯರ ಬಳಗ ಇಲ್ಲಿನ ವಿದ್ಯಾರಣ್ಯ ಹೈಸ್ಕೂಲಿನ ಸುಮಾರು 10 ವಿದ್ಯಾರ್ಥಿಗಳನ್ನು ಇತ್ತೀಚೆಗೆ ಶೈಕ್ಷಣಿಕವಾಗಿ ದತ್ತು ಪಡೆದರು.
ವಿದ್ಯಾರಣ್ಯ ಹೈಸ್ಕೂಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪಡೆಯಲಾಯಿತು. ಅತಿಥಿಗಳಾಗಿ ಆಗಮಿಸಿದ್ದ ಧಾರವಾಡ ಶಾಖೆಯ ಸಹಾಯಕ ಮಹಾ ಪ್ರಬಂಧಕರಾದ ಲಕ್ಷ್ಮಿ ಭಟ್ ಮಾತನಾಡಿ, ದತ್ತು ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದರೆ ಮಾತ್ರ ಶೈಕ್ಷಣಿಕವಾಗಿ ದತ್ತು ಪಡೆದು ಸಹಾಯಕ್ಕೆ ಪ್ರತಿಫಲ ಸಿಕ್ಕಂತಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ವ್ಯಸನಿಗಳಾಗದೆ, ಉತ್ತಮ ವ್ಯಾಸಂಗ ಮಾಡಿ ವಿದ್ಯಾಸಂಸ್ಥೆ ಗೌರವ ಹೆಚ್ಚಿಸಬೇಕು ಎಂದರು.
ಪ್ರಾಂಶುಪಾಲ ಜಿ.ಆರ್. ಭಟ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಬಿಐ ಬೆಂಗಳೂರ ಶಾಖೆಯ ರವಿಶಂಕರ ಹಕಾರಿ, ಹೊಸಪೇಟೆಯ ಪಂಪಾವತಿ, ಸಿಂಧೂ ಬಿಜಾಪುರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement