ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬ್ಯಾರಿಕೇಡ್ ಅಳವಡಿಕೆಗೆ ಆಗ್ರಹ

Lingaraj Badiger
Updated On : 18 Jul 2013, 11:47 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 17
ಹೆಗ್ಗೇರಿ ಪ್ರಮುಖ ರಸ್ತೆಗೆ ಸ್ಪೀಡ್ ಬ್ರೇಕರ್ ಮತ್ತು ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು ಎಂದು ಸಮತಾ ಸೇನೆ ಕಾರ್ಯಕರ್ತರು ಬುಧವಾರ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಿ ಸಂಚಾರಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಹೆಗ್ಗೇರಿ ಲೋಕೂರು ದ್ಯಾಮವ್ವ ಮಂದಿರದಿಂದ ಇಂಡಿಪಂಪ್‌ವರೆಗೆ ಅತಿಯಾದ ಸಂಚಾರ ದಟ್ಟಣೆ ಇದ್ದು, ಈ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ ಪೊಲೀಸ್ ಇಲಾಖೆ ತಕ್ಷಣ ಈ ರಸ್ತೆಗೆ ಬ್ಯಾರಿಕೇಡ್ ಮತ್ತು ರೋಡ್ ಹಂಪ್ಸ್‌ಗಳನ್ನು ನಿರ್ಮಿಸಿ ನಿರ್ಲಕ್ಷ್ಯದ ವಾಹನ ಸಂಚಾರಕ್ಕೆ ಕಡಿವಾಣ ಹಾಕಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಕುರಿತು ಹಲವಾರು ಬಾರಿ ಇಲ್ಲಿನ ನಿವಾಸಿಗಳು ಪೊಲೀಸ್ ಇಲಾಖೆಗೆ ಸಲ್ಲಿಸಿರುವ ಮನವಿಗಳಿಗೆ ಸ್ಪಂದಿಸಿಲ್ಲ. ಕನಿಷ್ಠ ಈ ಬಾರಿಯಾದರೂ ಮನವಿಗೆ ಸ್ಪಂದಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇಲ್ಲದಿದ್ದರೆ ಈ ನಿಟ್ಟಿನಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಪ್ರತಿಭಟನೆ ಸಂದರ್ಭದಲ್ಲಿ ಸಮತಾ ಸೇನೆ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ, ಮಹಾನಗರ ಪಾಲಿಕೆ ಸದಸ್ಯ ಲಕ್ಷ್ಮಣ ಗಂಡಗಾಳೇಕರ್, ದ್ರುವ ಗಾಮಗನಟ್ಟಿ, ಸತೀಶ ಸಾತಪುತೆ, ಲೋಹಿತ ಗಾಮನಗಟ್ಟಿ, ಹನುಮಂತ ತಳವಾರ, ಮಂಜುನಾಥ ಉಳ್ಳಿಕಾಶಿ ಸೇರಿದಂತೆ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement