ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅಧಿಕಾರಿಗಳಿಗೆ ಬೀಳ್ಕೊಡುಗೆ

Lingaraj Badiger
Updated On : 20 Jul 2013, 11:49 am

ಧಾರವಾಡ: ಕರ್ನಾಟಕ ವಿವಿ ಶಿಕ್ಷಕರ ಸಂಘ ಹಾಗೂ ವಿವಿ ವ್ಯಾಪ್ತಿಯ ಅನುದಾನಿತ ಪದವಿ ಕಾಲೇಜುಗಳ ಪ್ರಾಚಾರ್ಯರ ಸಂಘ ಇಲ್ಲಿನ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಪ್ರಭಾರಿ ಜಂಟಿ ನಿರ್ದೇಶಕರಾಗಿದ್ದ ಪ್ರೊ.ವಿ.ವಿ. ಘೋರ್ಪಡೆ ಅವರ ಬೀಳ್ಕೊಡುಗೆ ಹಾಗೂ ವರ್ಗಾವಣೆಗೊಂಡು ಮತ್ತೇ ಧಾರವಾಡದ ಜಂಟಿ ನಿರ್ದೇಶಕರಾಗಿ ಮರಳಿದ ಡಾ. ದೇವಾನಂದ ಗಾಂವಕರ ಅಭಿನಂದನಾ ಸಮಾರಂಭ ಶುಕ್ರವಾರ ನಡೆಯಿತು. ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ. ದೇವಾನಂದ ಗಾಂವಕರ ಮಾತನಾಡಿ, ಆತಂಕಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡು ಸಮಾಜದಲ್ಲಿ ಜಾಗೃತಿಯನ್ನುಂಟು ಮಾಡುವ ಕೆಲಸವಾಗಬೇಕಿದೆ. ಪ್ರತಿಯೊಬ್ಬರು ತಮ್ಮ ಕೆಲಸದಲ್ಲಿ ನಿರಂತರವಾಗಿ ತೊಡಗಿಕೊಳ್ಳುವ ಮೂಲಕ ಧನಾತ್ಮಕ ಚಿಂತನೆ ಕೈಗೊಂಡು ಸಮಾಜ ಸುಧಾರಣೆಯಲ್ಲಿ ಭಾಗವಹಿಸಬೇಕು ಎಂದರು. ಸಂಘದ ಅಧ್ಯಕ್ಷ ಡಾ.ಎನ್.ಬಿ. ಸಂಗಾಪುರ ಹಾಗೂ ಪ್ರಾಚಾರ್ಯ ಸಂಘದ ಅಧ್ಯಕ್ಷ ಪ್ರೊ.ಎನ್.ಆರ್. ಬಾಳಿಕಾಯಿ ಇದೇ ಸಂದರ್ಭ ಪ್ರೊ.ವಿ.ವಿ. ಘೋರ್ಪಡೆ ಅವರನ್ನು ಸನ್ಮಾನಿಸಿದರು. ಡಾ.ಡಿ.ಎಂ. ಹಿರೇಮಠ, ಡಾ.ಎಸ್.ವಿ. ಹೆಗಡಾಳ, ಪ್ರೊ.ಎಸ್.ಎಲ್. ಕುಲಕರ್ಣಿ, ಪ್ರೊ.ಎ.ಬಿ. ಶಿರಿಯಣ್ಣವರ, ಪ್ರೊ.ಸಿ.ಕೆ. ಹುಬ್ಬಳ್ಳಿ, ಡಾ. ಶ್ರೀಶೈಲ ಹುದ್ದಾರ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement