ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಇಂದು ಉಪನ್ಯಾಸ

Lingaraj Badiger
Updated On : 20 Jul 2013, 11:50 am

ಧಾರವಾಡ: ಇಲ್ಲಿನ ದಿಗಂಬರ ಜೈನ ಟ್ರಸ್ಟ್, ಜೈನ ಮಿಲನ್‌ಗಳು, ಸಮ್ಯಕ್-ಪ್ರಜ್ಞಾ ಮಹಿಳಾ ಮಂಡಳ, ಸನ್ಮತಿ ಸೇವಾ ಸಮಾಜ ಹಾಗೂ ಪೆರ್ಮಾಣು ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ಜು. 20ರಂದು ಸಂಜೆ 6ಕ್ಕೆ ಸನ್ಮತಿ ಜಿನ ಮಂದಿರಲ್ಲಿ ಚಾತುರ್ಮಾಸದ ನಿಮಿತ್ತ ವಿಶೇಷ ಉಪನ್ಯಾಸ ನಡೆಯಲಿದೆ.
  ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ನ.ವಜ್ರಕುಮಾರ ಉದ್ಘಾಟಿಸಲಿದ್ದು, ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಭಾಗವಹಿಸುತ್ತಾರೆ. ಬಾಲಬ್ರಹ್ಮಚಾರಿ ಸೋಮದೇವ ಸೂರಿ ಬೈಯಾಜಿ ಸಾನ್ನಿಧ್ಯ ವಹಿಸಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಜೈನ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸದುಪಯೋಗ ಮಾಡಿಕೊಳ್ಳಬೇಕೆಂದು ಪ್ರಾಧ್ಯಾಪಕ ಡಾ. ಜಿನದತ್ತ ಹಡಗಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಕೆಜೆಪಿ ಸಭೆ
ಧಾರವಾಡ: ಇಲ್ಲಿನ ಲಿಂಗಾಯತ ಟೌನ್ ಹಾಲ್‌ನಲ್ಲಿ ಜು. 20ರಂದು ಮಧ್ಯಾಹ್ನ 3ಕ್ಕೆ ಕರ್ನಾಟಕ ಜನತಾ ಪಕ್ಷದ ಸಭೆ ನಡೆಯಲಿದೆ. ಧಾರವಾಡ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಂಗನಗೌಡ ರಾಮನಗೌಡರ ಅಧ್ಯಕ್ಷತೆ ವಹಿಸುವರು. ಪಕ್ಷದ ಜಿಲ್ಲಾಧ್ಯಕ್ಷ ಸಿ.ಎಂ. ನಿಂಬಣ್ಣವರ, ರಾಜ್ಯ ರೈತ ಘಟಕದ ಅಧ್ಯಕ್ಷ ಈಶ್ವರಚಂದ್ರ ಹೊಸಮನಿ, ಪಕ್ಷದ ಮುಖಂಡರಾದ ಎಸ್.ಐ. ಚಿಕ್ಕನಗೌಡ್ರ, ವಿ.ಎಸ್. ಪಾಟೀಲ, ಪ್ರಕಾಶ ಜಕಾತಿ, ನಿಜನಗೌಡ ಪಾಟೀಲ, ತವನಪ್ಪ ಅಷ್ಟಗಿ, ಈರಯ್ಯ ಚಿಕ್ಕಮಠ, ಬಸವರಾಜ ಗುಂಡಗೋವಿ, ಶಂಕರ ಬಸವರೆಡ್ಡಿ ಸಭೆಯಲ್ಲಿ ಭಾಗಹಿಸಲಿದ್ದಾರೆ ಎಂದು ಶಿವಾನಂದ ದೇಶನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುವತಿ ಅಪಹರಣ
ಹುಬ್ಬಳ್ಳಿ:  ಯುವತಿಯೊಬ್ಬಳನ್ನು ಅಪಹರಿಸಿದ ಘಟನೆ ನಗರದ ಕೇಶ್ವಾಪುರ ವಿನಯ ಕಾಲೋನಿಯಲ್ಲಿ ಇತ್ತೀಚೆಗೆ ನಡೆದಿದೆ. ನಾಗೇಶ ನಾರಾಯಣರಾವ್ ಶರ್ಮಾ ಎಂಬುವರ 22 ವರ್ಷದ ಮಗಳನ್ನು ಅಪಹರಿಸಲಾಗಿದೆ. ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಕಳ್ಳತನ
ಹುಬ್ಬಳ್ಳಿ:  ಕೇಶ್ವಾಪುರ ವಿನಯ ಕಾಲನಿಯಲ್ಲಿ ಮನೆ ಗೇಟಿನ ಹೊರಗೆ ನಿಲ್ಲಿಸಿದ್ದ ಟಿವಿಎಸ್ ಸ್ಕೂಟಿ ಕಳ್ಳತನವಾಗಿದೆ. ನಾಗುಶಾ ಲಕ್ಷ್ಮಸಾ ಕಲಬುರ್ಗಿ ತಮ್ಮ ಮನೆ ಗೇಟಿನ ಬಳಿ ಜು. 16ರ ರಾತ್ರಿ 11ಕ್ಕೆ ನಿಲ್ಲಿಸಿದ್ದ ಸ್ಕೂಟಿ (ಕೆಎ-25 ಆರ್-4738 ಚಸ್ಸಿ ನಂ. ಕೆಓಜೆಜಿಎಫ್-607865 ಹಾಗೂ ಇಂಜಿನ್ ನಂ. ಕೆಓಐಜಿಎಮ್ -599288) ಕಳ್ಳತನವಾಗಿದೆ. ಸ್ಕೂಟಿ ಡಿಕ್ಕಿಯಲ್ಲಿ ತಮ್ಮ ಮಕ್ಕಳಾದ ವಿಜಯಲಕ್ಷ್ಮೀ ಹಾಗೂ ಪ್ರೀತಿ ಇವರ ದ್ವಿಚಕ್ರ ವಾಹನದ ಮೂಲ ಡ್ರೈವಿಂಗ್ ಲೈಸನ್ಸಗಳನ್ನು ಇಟ್ಟಿದ್ದರು. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಸೀದಿ ಎದುರು ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ ಘಟನೆ ಮಂಟೂರು ರಸ್ತೆಯಲ್ಲಿ ನಡೆದಿದೆ. ಶೌಕತ್‌ಲಿ ಇಮಾಮಹುಸೇನ ಹೊಸಮನಿ ಎಂಬುವರು ತಮ್ಮ ಬಜಾಜ್ ಪ್ಲಾಟೀನಾ ಬೈಕ್‌ನ್ನು (ಕೆಎ-25 ಇಎಲ್-7113) ಮಸೀದಿ ಎದುರು ನಿಲ್ಲಿಸಿ, ಪ್ರಾರ್ಥನೆ ಮಾಡಿ ಬರುವಷ್ಟರಲ್ಲಿ ಕಳ್ಳತನವಾಗಿದೆ. ಈ ಕುರಿತು ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments