ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪ್ಯಾಸೆಂಜರ್ ರೈಲಿನ ಸಂಚಾರ ವಿಸ್ತರಣೆ

Lingaraj Badiger
Updated On : 20 Jul 2013, 11:49 am

 ಹುಬ್ಬಳ್ಳಿ:  ದರ್ಬಂಗಾ-ಬೆಂಗಳೂರು ನಗರ-ದರ್ಬಂಗಾ ವೀಕ್ಲಿ ಭಾಗಮತಿ ಎಕ್ಸ್‌ಪ್ರೆಸ್ ರೈಲು ಮೈಸೂರಿನವರೆಗೆ ಹಾಗೂ ಬೆಂಗಳೂರು ನಗರ-ನಾಗರಕೊಯಿಲ್ ಡೈಲಿ ಪ್ಯಾಸೆಂಜರ್ ರೈಲು ಸಂಚಾರವನ್ನು ಕರೈಕಲ್‌ವರೆಗೆ ವಿಸ್ತರಿಸಲಾಗಿದೆ. ದರ್ಬಂಗಾ-ಮೈಸೂರು ವೀಕ್ಲಿ ಭಾಗಮತಿ ಎಕ್ಸ್‌ಪ್ರೆಸ್ ರೈಲು (12577) ಜು. 23ರಿಂದ ಪ್ರತಿ ಮಂಗಳವಾರ ಸಂಜೆ 4.10ಕ್ಕೆ ದರ್ಬಂಗಾ ನಿಲ್ದಾಣದಿಂದ ಹೊರಟು ಗುರುವಾರ ರಾತ್ರಿ 11.35ಕ್ಕೆ ಮೈಸೂರು ನಿಲ್ದಾಣ ತಲುಪುವುದು. ಮೈಸೂರು-ದರ್ಬಂಗಾ ವೀಕ್ಲಿ ಭಾಗಮತಿ ಎಕ್ಸ್‌ಪ್ರೆಸ್ ರೈಲು (12578) ಜು. 27ರಿಂದ ಪ್ರತಿ ಶನಿವಾರ ಬೆಳಗ್ಗೆ 7.20ಕ್ಕೆ ಮೈಸೂರು ನಿಲ್ದಾಣದಿಂದ ಹೊರಟು ಸೋಮವಾರ ಮಧ್ಯಾಹ್ನ 2.25ಕ್ಕೆ ದರ್ಬಂಗಾ ನಿಲ್ದಾಣ ತಲುಪುವುದು. ಬೆಂಗಳೂರು ನಗರ-ಕರೈಕಲ್ ಡೈಲಿ ಪ್ಯಾಸೆಂಜರ್ ರೈಲು (56514) ಜು. 19ರಿಂದ ಪ್ರತಿ ದಿನ ಬೆಂಗಳೂರು ನಗರದಿಂದ ಬೆಳಗ್ಗೆ 7.15ಕ್ಕೆ ಹೊರಟು ಅದೇ ದಿನ ರಾತ್ರಿ 10.30ಕ್ಕೆ ಕರೈಕಲ್ ನಿಲ್ದಾಣ ತಲುಪುವುದು. ಕರೈಕಲ್-ಬೆಂಗಳೂರು ನಗರ ಡೈಲಿ ಪ್ಯಾಸೆಂಜರ್ ರೈಲು (56513) ಕರೈಕಲ್ ನಿಲ್ದಾಣದಿಂದ ಜು. 20ರಿಂದ ಪ್ರತಿ ದಿನ ಬೆಳಗಿನಜಾವ 3.40ಕ್ಕೆ ಹೊರಟು ಅದೇ ದಿನ ರಾತ್ರಿ 7ಕ್ಕೆ ಬೆಂಗಳೂರು ನಗರ ನಿಲ್ದಾಣ ತಲುಪುವುದು ಎಂದು ನೈಋತ್ಯ ರೇಲ್ವೆ ವಲಯ ಕಚೇರಿ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement