ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ರಂಗ ಗ್ರಂಥಾಯಣ ಶುರು

Vishwanath S
Updated On : 21 Jul 2013, 11:34 am

ಧಾರವಾಡ: ಇಲ್ಲಿನ ರಂಗಾಯಣದ ಆವರಣದಲ್ಲಿರುವ ಸಾಂಸ್ಕೃತಿಕ ಸಮುಚ್ಚಯದಲ್ಲಿ ಆರಂಭಿಕವಾಗಿ 850 ನಾಟಕಗಳ ರಂಗ ಗ್ರಂಥಾಯಣ ಶುರುವಾಗಿದ್ದು, ಶನಿವಾರ ಹಿರಿಯ ಗ್ರಂಥಪಾಲಕ ಎಸ್.ಆರ್. ಗುಂಜಾಳ ಚಾಲನೆ ನೀಡಿದರು.
ಕಾವ್ಯ, ಕಾದಂಬರಿ ಹೀಗೆ ಎಲ್ಲ ಪ್ರಕಾರದ ಸಾಹಿತ್ಯದಲ್ಲಿ ನಾಟಕಕ್ಕೆ ಮೊದಲ ಸ್ಥಾನವಿದೆ. ಉಳಿದ ಸಾಹಿತ್ಯವನ್ನು ಕಷ್ಟಪಟ್ಟು ಓದಿ ಅರ್ಥೈಸಿ ಸಮಾಧಾನಪಟ್ಟುಕೊಳ್ಳಬೇಕು. ಆದರೆ, ನಾಟಕ ನೋಡಲು ಅಂದ, ಕೇಳಲು ಸುಮಧುರ ಹಾಗೂ ಮನಕ್ಕೆ ಸಂತಸ ನೀಡಿ ಭಾವಲೋಕಕ್ಕೆ ಕರೆದೊಯ್ಯುತ್ತದೆ. ಅದರಲ್ಲಿನ ಪಾತ್ರ, ನಿರೂಪಣೆ, ಸಂಗೀತ ಮನಕ್ಕೆ ಮುದ ನೀಡುತ್ತದೆ. ಆದ್ದರಿಂದ ನಾಟಕ್ಕೆ ಹಿಂದಿನಿಂದಲೂ ಗೌರವದ ಭಾವನೆ ಇದೆ. ಆದರೆ, ಎಲ್ಲ ಸಾಹಿತ್ಯಗಳು ಮುಂದೆ ಬಂದರೂ ರಂಗಭೂಮಿ ಮಾತ್ರ ಉದ್ದೇಶಿತ ಮಟ್ಟಕ್ಕೆ ಬೆಳೆಯದಿರುವುದು ಬೇಸರದ ಸಂಗತಿ ಎಂದರು.
ಹಿಂದಿನ ನಾಟಕಗಳಿಗೂ ಪ್ರಸ್ತುತ ಪ್ರದರ್ಶನಗೊಳ್ಳುವ ನಾಟಕಗಳಿಗೂ ಬಹಳ ವ್ಯತ್ಯಾಸವಿದೆ. ಪ್ರಸ್ತುತ ಲೈಂಗಿಕತೆಯನ್ನು ನಾಟಕದಲ್ಲಿ ಹೆಚ್ಚು ಮಾನ್ಯ ಮಾಡಲಾಗುತ್ತಿದೆ. ಲೈಂಗಿಕತೆ ಬಿಟ್ಟು ನಾಟಕದಲ್ಲಿ ಬೇರೇನೂ ಇಲ್ಲವೆಂಬಂತೆ ಬಿಂಬಿಸಲಾಗುತ್ತಿದೆ. ಇದನ್ನು ಹೋಗಲಾಡಿಸಬೇಕೆಂದು ಗುಂಜಾಳ ಅವರು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿರ್ದೇಶಕ ಸುಭಾಸ ನರೇಂದ್ರ, ರಂಗ ಗ್ರಂಥಾಯಣ ಆರಂಭ ಮಾಡಿದ್ದು, ಈ ಗ್ರಂಥಾಲಯವನ್ನು ಮುಂದಿನ ನಿರ್ದೇಶಕರು ಬೆಳೆಸಿಕೊಂಡು ಹೋಗಬೇಕೆಂದು ಮನವಿ ಮಾಡಿದರು. ಆಡಳಿತಾಧಿಕಾರಿ ಕೆ.ಎಚ್. ಚೆನ್ನೂರು, ಕೆ. ಜಗುಚಂದ್ರ ಕೂಡ್ಲ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement