ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಎಲ್ಲರಿಗೂ ಕಾನೂನಿನ ಜ್ಞಾನ ಅಗತ್ಯ: ಪಾಟೀಲ್

Mainashree
Updated On : 24 Jul 2013, 11:15 am

ಧಾರವಾಡ: ಕಾನೂನಿನ ಜ್ಞಾನ ಇಂದಿನ ಜಗತ್ತಿಗೆ ಆವಶ್ಯವಾಗಿದೆ. ಅದರಂತೆ ವಿದ್ಯಾರ್ಥಿಗಳು ಪ್ರತಿನಿತ್ಯ ಓದುವುದರ ಜತೆಗೆ ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಉತ್ತಮ ಪ್ರತಿಫಲ ಪಡೆಯಲು ಸಾಧ್ಯ ಎಂದು ಬೆಂಗಳೂರು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಶೋಕ ಪಾಟೀಲ ಹೇಳಿದರು. ಇಲ್ಲಿನ ಆರ್‌ಎಲ್‌ಎಸ್ ಕಾಲೇಜಿನಲ್ಲಿ ನಡೆದ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಮತ್ತು ಕಲಾ ವಿಭಾಗದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ಅರಿವು ಹೊಂದಿರಬೇಕು. ಪಿಯುಸಿ ನಂತರದ ಜೀವನದಲ್ಲಿ ಕಾನೂನು ಜ್ಞಾನ ಅಳವಡಿಸಿಕೊಂಡು ಕಾನೂನು ತಜ್ಞರಾಗಬೇಕು ಎಂದು ತಿಳಿಸಿದರು.
ವಿಭಿನ್ನ ಸಾಧನೆ ಬೇಕು: ಯಾವುದೇ ಭಾಷೆಯಾಗಲಿ ಸುಲಭವಾಗಿ ಕಲಿಯುವುದರ ಮೂಲಕ ವಿಭಿನ್ನ ಸಾಧನೆ ಮಾಡಬೇಕು. ಶಿಕ್ಷಕರು ನೀಡುವ ಉಪದೇಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದರು. ಆಕಾಶವಾಣಿ ನಿಲಯ ನಿರ್ದೇಶಕ ಸಿ.ಯು. ಬೆಳ್ಳಕ್ಕಿ ಮಾತನಾಡಿ, ದೂರದೃಷ್ಟಿ ಇಲ್ಲದ ಜನತೆ ಇಂದು ಕುರುಡರಂತೆ ಜೀವನ ಸಾಗಿಸಬೇಕಾಗಿದೆ. ಪ್ರತಿಯೊಬ್ಬರೂ ಮಾತನಾಡುವ ಕಲೆಯನ್ನು ರೂಢಿಸಿಕೊಳ್ಳುವುದರೊಂದಿಗೆ ಸಮಯದ ಸದುಪಯೋಗ ಪಡೆದುಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದರು. ಉಪಪ್ರಾಚಾರ್ಯ ಬಿ.ಎಂ. ಸುರೇಬಾನ, ಕರಣ ದೊಡವಾಡ, ಸಿ.ವಿ. ಕಣಬರ್ಗಿ ಇದ್ದರು. ಪ್ರಾಚಾರ್ಯ ಅಶೋಕ ಶಿಂಗೆ ಸ್ವಾಗತಿಸಿದರು. ಚೈತ್ರಾ ಹೆಬ್ಬಾರ ನಿರೂಪಿಸಿದರು. ಎಸ್.ಪಿ. ಸಂಗಳಿ ವಂದಿಸಿದರು.
27ಕ್ಕೆ ತಾಪಂ ಸಾಮಾನ್ಯ ಸಭೆ
ಹುಬ್ಬಳ್ಳಿ: ಹುಬ್ಬಳ್ಳಿ ತಾಪಂ ಸಾಮಾನ್ಯ ಸಭೆ ಜು. 27ರ ಬೆಳಗ್ಗೆ 11ಕ್ಕೆ ತಾಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಮಿನಿ ವಿಧಾನಸೌಧದ 2ನೇ ಮಹಡಿ ಸಭಾಂಗಣದಲ್ಲಿ ಜರುಗಲಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement