ರಾಮಾಪುರಗೆ ಗುರು ಪುರಸ್ಕಾರ
ಧಾರವಾಡ: ಸಮೀಪದ ಭೈರಿದೇವರಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಲಿಂಗರಾಜ ರಾಮಾಪುರ ಅವರಿಗೆ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಮಾಜಿ ರಾಷ್ಟ್ರಪತಿ, ವಿಜ್ಞಾನಿ, ಭಾರತರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಇತ್ತೀಚೆಗೆ ಗುರು ಪುರಸ್ಕಾರ ನೀಡಿ ಗೌರವಿಸಿದರು.
ಶಿಕ್ಷಣ ಫೌಂಡೇಶನ್ ಜು. 20ರಂದು ಬೆಂಗಳೂರಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ದಶಮಾನೋತ್ಸವ ಸಮಾರಂಭದಲ್ಲಿ ರಾಜ್ಯದ ಮೂವರು ಸರ್ಕಾರಿ ಶಾಲಾ ಶಿಕ್ಷಕರಿಗೆ ಗುರು ಪುರಸ್ಕಾರ ನೀಡಿ ಗೌರವಿಸಿತು. ಈ ಸಂದರ್ಭದಲ್ಲಿ ಪ್ರಾಥಮಿಕಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಶಿಕ್ಷಣ ಫೌಂಡೇಶನ್ ಸಂಸ್ಥಾಪಕ ಇ.ಎಸ್. ರಾಮಮೂರ್ತಿ, ಅಧ್ಯಕ್ಷ ಪ್ರಶಾಂತ ಪ್ರಕಾಶ, ಸಿಇಒ ವಿ.ಆರ್. ಪ್ರಸನ್ನ, ಶಿಕ್ಷಣ ಇಲಾಖೆ ಆಯುಕ್ತ ಮಹಮ್ಮದ ಮೌಸಿನ್, ಜಿ. ಕುಮಾರ ನಾಯಕ, ಉಪನಿರ್ದೇಶಕ ಬಿ.ಕೆ.ಎಸ್. ವರ್ಧನ್, ಸಿ.ಓ.ಓ. ಕುಮಾರ ಅನಿಶ್ ಇದ್ದರು.
ಗುರು ಪುರಸ್ಕೃತ ಮೂವರು ಶಿಕ್ಷಕರಿಗೆ ಶಿಕ್ಷಣ ಫೌಂಡೇಶನ್ ನಾಲ್ಕು ವಾರಗಳ ಕಾಲ ಅಮೆರಿಕ, ಯುರೋಪ ದೇಶಗಳಿಗೆ ಅಧ್ಯಯನ ಪ್ರವಾಸವನ್ನು ಪ್ರಾಯೋಜಿಸುತ್ತಿದೆ.