ಕಾರ್ಗಿಲ್ ವಿಜಯೋತ್ಸವ: ರ್ಯಾಲಿ
ಹುಬ್ಬಳ್ಳಿ: ಕಾರ್ಗಿಲ್ ವಿಜಯೋತ್ಸವ ಹಾಗೂ ವೀರ ಸೈನಿಕರ ಸ್ಮರಣೆ ಅಂಗವಾಗಿ ಶ್ರೀ ಗಜಾನನ ಮಹಾಮಂಡಳ ವತಿಯಿಂದನಗರದಲ್ಲಿ ಶುಕ್ರವಾರ ರ್ಯಾಲಿ ಆಯೋಜಿಸಲಾಗಿತ್ತು.
ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ನಿವೃತ್ತ ಮೇಜರ್ ಬಿ.ಎ. ದೊಡ್ಡಮನಿ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವೀರ ಯೋಧರ ಬಗ್ಗೆ ಮಾಹಿತಿ ನೀಡುವ ಹಾಗೂ ವಿದ್ಯಾರ್ಥಿಗಳು ಸೇನೆ ಸೇರುವಂತೆ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ವೀರಯೋಧರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಅತಿಥಿಯಾಗಿದ್ದ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಹೇಳಿದರು. ಮಹಾಮಂಡಳದ ಅಧ್ಯಕ್ಷ ಡಿ. ಗೋವಿಂದರಾವ್ ನೇತೃತ್ವದಲ್ಲಿ ನಡೆದ ರ್ಯಾಲಿಯಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ ರ್ಯಾಲಿ ನಡೆಯಿತು. ಎಸ್‌ಜೆಎಂವಿಎಸ್ ಕಲಾ ಹಾಗೂ ವಾಣಿಜ್ಯ ಮಹಿಳಾ ಕಾಲೇಜಿನ ಶಿಕ್ಷಕರಾದಸಿಸಿಲಿಯಾ ಡಿಕ್ರೂಸ್, ಸ್ಮೀತಾ ಪಾಟೀಲ, ಸುನಿತಾ ಬಟ್ಟೂರ, ನೀತಾ ಬಾಳೆಹೊಸೂರ, ಲ್ಯಾಮಿಂಗಟನ್ ಶಾಲೆಯ ಪ್ರಾಂಶುಪಾಲ ವಿ.ಟಿ. ಚಾಕಲಬ್ಬಿ, ಎನ್.ಬಿ. ಚಿಂಚಲಿ, ಟಿ.ಎಂ. ವಿಶ್ವನಾಥ, ಮಹಾಮಂಡಳದ ಪದಾಧಿಕಾರಿಗಳಾದ ಎಂ.ಆರ್. ಪಾಟೀಲ, ಅನಿತಾ ಗುಂಜಾಳ, ಶಕುಂತಲಾ ಶೆಟ್ಟಿ ಮತ್ತಿತರರು ಹಾಜರಿದ್ದರು.