ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸುದ್ದಿ ಸಂಕ್ಷೇಪ

Mainashree
Updated On : 28 Jul 2013, 1:14 am

ಇಂದು ಕೃತಿ ಬಿಡುಗಡೆ
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ರಾ.ಹ. ದೇಶಪಾಂಡೆ ಸಭಾ ಭವನದಲ್ಲಿ ಜು. 28ರಂದು ಸಂಜೆ 5.30ಕ್ಕೆ ಕೃತಿ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಲ್ಲಿಕಾರ್ಜುನ ಹಿರೇಮಠ ಹಾಗೂ ಪ್ರಭಾಕರ ಮಳಿಯೆ ಅವರ ಹವನ ಕಾದಂಬರಿ, ಅಭಿಮುಖ ಎಂಬ ವಿಮರ್ಶಾ ಲೇಖನಗಳು ಹಾಗೂ ಆಲ್ಬರ್ಟ್ ಕಾಮು ಬದುಕು ಬರಹ (ಅನುದಾದ) ಕೃತಿಗಳನ್ನು ಡಾ. ಗಿರಡ್ಡಿ ಗೋವಿಂದರಾಜು ಹಾಗೂ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಬಿಡುಗಡೆಗೊಳಿಸಲಿದ್ದಾರೆ. ಡಾ. ಜಿ.ಎಸ್. ಆಮೂರ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಕ್ಯಾಂಪಸ್ ಸಂದರ್ಶನ
ಧಾರವಾಡ: ಇಲ್ಲಿನ ಜೆಎಸ್ಸೆಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಜು. 28ರಂದು ಐಸಿಐಸಿಐ ಜ್ಯೂನಿಯರ್ ಆಫೀಸರ್ಸ್ ಹುದ್ದೆಗಾಗಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ. 2011, 2012, 2013ರಲ್ಲಿ ಪಾಸಾದ ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಸ್ಸಿ, ಪದವೀಧರರು ಈ ಸಂದರ್ಶನದಲ್ಲಿ ಭಾಗವಹಿಸಬಹುದು. ಆಸಕ್ತರು ಜು. 26ರೊಳಗೆ ಮಹಾವೀರ ಉಪಾಧ್ಯೆ (93426 93198) ಸಂಪರ್ಕಿಸಿ ಹೆಸರನ್ನು ನೋಂದಾಯಿಸಲು ಕಾಲೇಜಿನ ಪ್ರಾಚಾರ್ಯ ಡಾ. ಅಜಿತ ಪ್ರಸಾದ ತಿಳಿಸಿದ್ದಾರೆ.
ನಾಳೆ ನೃತ್ಯ ರೂಪದಲ್ಲಿ ಸಂಪೂರ್ಣ ರಾಮಾಯಣ
ಹುಬ್ಬಳ್ಳಿ: ಶಿರಸಿ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದಿಂದ ಜು. 28ರ ಸಂಜೆ 5:30ಕ್ಕೆ ಸವಾಯಿ ಗಂಧರ್ವ ಹಾಲ್‌ನಲ್ಲಿ ಸಂಪೂರ್ಣ ರಾಮಾಯಣವನ್ನು ನೃತ್ಯ ರೂಪದಲ್ಲಿ ಪ್ರದರ್ಶಿಸುವುದಾಗಿ ನೃತ್ಯ ಕೇಂದ್ರದ ವಿದುಷಿ ಸಹನಾ ಭಟ್ ಹೇಳಿದರು. ಕೆ.ಜಿ. ಭಟ್ ಉದ್ಘಾಟಿಸುವರು. ಮನೋಜ ಹಾನಗಲ್ ಅಧ್ಯಕ್ಷತೆ ವಹಿಸುವರು. ಡಾ. ಅಜಿತ ಪ್ರಸಾದ, ಡಿ.ಎ. ಉಪಾಧ್ಯಾಯ, ಸುಜಾತಾ ರಾಜಗೋಪಾಲ ಆಗಮಿಸುತ್ತಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement