ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅನುದಾನಿತ ಪಪೂ ಕಾಲೇಜು ಸಿಬ್ಬಂದಿ ಬೇಡಿಕೆ ಈಡೇರಿಸಿ

Lingaraj Badiger
Updated On : 29 Jul 2013, 11:48 am

ಕನ್ನಡಪ್ರಭ ವಾರ್ತೆ, ಬೆಂಗಳೂರು, ಜು.28
ಅನುದಾನಿತ ಪದವಿಪೂರ್ವ ಕಾಲೇಜುಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನಾನಾ ಸಮಸ್ಯೆಗಳಿಗೆ ಪರಿಹಾರ ಕೋರಿ ಅಖಿಲ ಕರ್ನಾಟಕ ಖಾಸಗಿ ಅನುದಾನಿತ ಪದವಿಪೂರ್ವ ಮಹಾವಿದ್ಯಾಲಯಗಳ ಬೋಧಕ- ಬೋಧಕೇತರ ಸಂಘದ ಪ್ರತಿನಿಧಿಗಳು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರನ್ನು ಭೇಟಿ ಮಾಡಿದ್ದಾರೆ.
ಕಾಲ್ಪನಿಕ ವೇತನ ಬಡ್ತಿ, ಸಮಯಕ್ಕನುಸಾರವಾಗಿ ವೇತನ ಬಿಡುಗಡೆ, ಖಾಲಿ ಹುದ್ದೆಗಳ ಭರ್ತಿ, ಬೋಧನಾ ಶುಲ್ಕ, ಉಪನ್ಯಾಸಕರ ವೇತನ ಪರಿಷ್ಕರಣೆ, ಸೇವಾ ಭದ್ರತೆ ಹಾಗೂ ಇತರ 25 ಬೇಡಿಕೆಗಳನ್ನು ಒಳಗೊಂಡ ಬೇಡಿಕೆ ಪತ್ರವನ್ನು ಸಚಿವರಿಗೆ ಸಂಘದ ಅಧ್ಯಕ್ಷ ಎಂ.ಪಿ. ಕರಬಸಪ್ಪ ಅವರು ನೀಡಿದ್ದಾರೆ.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಕೆ.ಆರ್. ಮಂಜುನಾಥ್, ಆರ್. ವೀರಣ್ಣ ಹಾಗೂ ರಮೇಶ್ ಜಿ.  ಮಲ್ಲಿಕಾರ್ಜುನ್ ಇದ್ದರು.

ಕಾನೂನು ಕ್ಲಬ್ ಉದ್ಘಾಟನೆ
ಧಾರವಾಡಛ ಇಲ್ಲಿನ ಬಾಸೆಲ್ ಮಿಶನ್ ಬಾಲಕರ ಪ್ರೌಢ ಶಾಲೆಯಲ್ಲಿ ನೂತನ ಕಾನೂನು ಕ್ಲಬ್‌ನ್ನು ನ್ಯಾ. ಪ್ರಕಾಶ ನಾಡಿಗೇರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪ್ರಸ್ತುತ ಮಕ್ಕಳಿಗೆ ಕಾನೂನಿನ ಕುರಿತು ಜ್ಞಾನ ಅವಶ್ಯವಾಗಿದೆ. ಶಾಲೆಗೆ ಹೋಗುವ ಹಾಗೂ ಬರುವ ಸಂದರ್ಭದಲ್ಲಿ ರಸ್ತೆಯ ಸುರಕ್ಷತೆ ಕುರಿತು ಮಕ್ಕಳಲ್ಲಿ ಅರಿವು ಇದ್ದರೆ ಯಾವುದೇ ರೀತಿಯ ಅವಘಡಗಳು ಸಂಭವಿಸುವುದಿಲ್ಲ. ಆದ್ದರಿಂದ, ಮಕ್ಕಳಿಗೆ ತಪ್ಪದೇ ರಸ್ತೆ ಸುರಕ್ಷತೆ ನಿಯಮಗಳ ಬಗ್ಗೆ ಶಿಕ್ಷಕರು, ಪಾಲಕರು ತಿಳಿವಳಿಕೆ ನೀಡಬೇಕು ಎಂದರು.
ನ್ಯಾಯವಾದಿ ವೆಂಕಟೇಶ ಕುಲಕರ್ಣಿ ಮಾತನಾಡಿ, ಪ್ರತಿಯೊಬ್ಬರಿಗೂ ಕಾನೂನಿನ ಜ್ಞಾನ ನೀಡುವುದು ಅವಶ್ಯಕವಾಗಿದೆ. ಕಾನೂನಿ ಜ್ಞಾನವಿದ್ದರೆ, ಅಪರಾಧಗಳ ಸಂಖ್ಯೆಯೂ ಕಡೆಮೆಯಾಗುತ್ತವೆ. ಅಲ್ಲದೇ, ಸಮಾಜದಲ್ಲಿ ಜಾಗೃತಿ ಉಂಟಾಗುತ್ತದೆ ಎಂದರು. ಉಪಪ್ರಾಚಾರ್ಯ ಸುಮಂಗಲಾ ಕುರಿ ಅಧ್ಯಕ್ಷತೆ ವಹಿಸಿದ್ದರು. ಜಗದೀಶ ಮಲ್ಲನಗೌಡರ, ಎಂ.ಡಿ. ಮುತ್ತಲಗೇರಿ, ಕರಡಿಗುಡ, ಎಸ್.ಐ. ದಮ್ಮು, ದೀನಾ ಬೇಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement