ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಧಾರವಾಡ: ನಿವೃತ್ತ ನೌಕರರಸಂಘದಿಂದ ಸಹಾಯಧನ

Lingaraj Badiger
Updated On : 30 Jul 2013, 11:01 am

ಧಾರವಾಡ: ಉತ್ತರಾಖಂಡ ನೆರೆ ಸಂತ್ರಸ್ತರಿಗಾಗಿ ಧಾರವಾಡ ಜಿಲ್ಲಾ ನಿವೃತ್ತ ನೌಕರರ ಸಂಘದಿಂದ ಸಂಗ್ರಹಿಸಿದ್ದ ರು. 36,350ರ ಡಿಡಿಯನ್ನು ಜಿಲ್ಲಾಧಿಕಾರಿ ಕಚೇರಿ ಮೂಲಕ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಎಸ್.ಎಸ್. ಕಣವಿ, ಗೌರವಾಧ್ಯಕ್ಷ ಡಾ. ಎಂ.ಸಿ. ಗಿರಿಯಪ್ಪನವರ, ಉಪಾಧ್ಯಕ್ಷ ಎಂ.ಎಂ. ದಾಮೋದರ, ಕಾರ್ಯದರ್ಶಿ ವಿ.ಬಿ. ಮತ್ತೂರ, ಖಜಾಂಚಿ ಬಿ.ಕೆ. ಕುಲಕರ್ಣಿ, ಸಂಘಟನೆ ಕಾರ್ಯದರ್ಶಿ ಎಂ.ಟಿ. ಮಲ್ಲಾಡ, ಪದಾಧಿಕಾರಿಗಳಾದ ಲೀಲಾವತಿ ಅಂಕಲಿ, ಲೀಲಾವತಿ ಕಳಸಪ್ಪನವರ, ಎಸ್.ವೈ. ಸಂಗೊಳ್ಳಿ, ಜಿ.ಜಿ. ಹಿರೇಮಠ, ಶಿವಣ್ಣ ಬಡಿಗೇರ, ಎಂ.ಪಿ. ಹರಗನಹಳ್ಳಿ, ವಿ.ಸಿ. ಚೌಶೆಟ್ಟಿ, ಡಾ. ಎಂ.ವಿ. ಮುಗದ, ಡಾ. ಆರ್.ಎಫ್. ಪಾಟೀಲ, ಬಿ.ಬಿ. ಸದಾನಂದ, ಆರ್.ಎಸ್. ಸಾಲಿಮಠ, ಎಚ್.ಎಸ್. ಮೂಲಂಗಿ, ಸಿ.ಬಿ. ಕವಳಿಕಾಯಿ, ಡಿ.ಸಿ. ಪಾಟೀಲ, ಡಿ.ಬಿ. ಗದ್ರೆ, ಕೆ.ವಿ. ಹಾವನೂರ, ಬಿ.ಎಸ್. ಶಹಾಪುರಮಠ, ಎಂ.ಬಿ. ಪರಪ್ಪಗೌಡರ, ಸಿ.ಆರ್. ಬೋರಕರ, ಡಾ. ಸಿ.ಸಿ. ಒಡೆಯರ, ಡಾ. ಜಿ.ವಿ. ತೊಗರ್ಸಿ, ಟಿ.ಜಿ. ಚೌಡರೆಡ್ಡಿ, ವಿ.ಎಂ. ಸಾವಕ್ಕನವರ ನಿಧಿಗೆ ಸಹಕಾರ ನೀಡಿದ್ದಾರೆ.
ಪಾಲಿಕೆಯಲ್ಲಿ ಜನರ ಗೋಳು ಕೇಳುವವರಿಲ್ಲ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮೇಯರ್ ಮತ್ತು ಉಪಮೇಯರ್ ಆಯ್ಕೆಯಾದ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯರಿಂದ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಆಗುತ್ತಿಲ್ಲ ಎಂದು ಓಂ ನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚೆನ್ನಬಸಪ್ಪ ಧಾರವಾಡ ಶೆಟ್ಟರ್ ಆರೋಪಿಸಿದ್ದಾರೆ.  ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಹಾನಗರದ ಎಲ್ಲ ವಾರ್ಡ್ ಸದಸ್ಯರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಮುಖ್ಯವಾಗಿ ರಸ್ತೆ, ಬೀದಿದೀಪ ಮತ್ತು ಕುಡಿಯುವ ನೀರು ಸೇರಿದಂತೆ ಇನ್ನಿತರ ಸಮಸ್ಯೆಗಳು ಜನರನ್ನು ಕಾಡುತ್ತಿದ್ದು, ಈ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪಾಲಿಕೆ ಸದಸ್ಯರು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ನಾಗರಿಕರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಪ್ರತಿಭಟನೆ ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಬೀದಿ ನಾಯಿಗಳ ದಾಳಿ: ಬಾಲಕನಿಗೆ ಗಾಯ
ಹುಬ್ಬಳ್ಳಿ: ಇಲ್ಲಿನ ಚೆನ್ನಪೇಟದ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಕಚ್ಚಿವೆ. ಸೋಮವಾರ, ಚೆನ್ನಪೇಟದಲ್ಲಿನ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕೌಟುಂಬಿಕ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ ಮಂಜುನಾಥ ಬಸವಾ ಎಂಬ 9 ವರ್ಷದ ಬಾಲಕನ ಮೇಲೆ ನಾಯಿಗಳ ಗುಂಪು ಏಕಕಾಲಕ್ಕೆ ದಾಳಿ ಮಾಡಿ ಗಾಯಗೊಳಿಸಿವೆ. ಬಾಲಕನ ಮುಖ ಮತ್ತು ಪೃಷ್ಟ ಭಾಗಕ್ಕೆ ಕಚ್ಚಿವೆ. ಗಾಯಗೊಂಡಿರುವ ಬಾಲಕ ಮಂಜುನಾಥ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement