ಈ ಆಟ ಹೊಟ್ಟೆಗಾಗಿ...
ಉಚಿತ ಶಿಕ್ಷಣ, ಬಿಸಿಯೂಟ, ಉಚಿತ ವಸತಿ ಸೇರಿದಂತೆ ಬಡ ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರ ಹತ್ತಾರು ಯೋಜನೆಗಳನ್ನು ರೂಪಿಸಿದ್ದರೂ ಅನೇಕ ಮಕ್ಕಳಿಗೆ ಈ ಯೋಜನೆಗಳ ಫಲ ದೊರೆತಿಲ್ಲ. ಭಿಕ್ಷೆ ಬೇಡುವುದು, ಕಸ ಆರಿಸುವುದು, ಹೋಟೆಲ್ಗಳಲ್ಲಿ ಕೆಲಸ ಮಾಡುವುದು, ವಿವಿಧ ಆಟಗಳ ಮೂಲಕ ಜನರನ್ನು ಮನರಂಜಿಸಿ ಹಣ ಬೇಡುವುದು ಸೇರಿದಂತೆ ಹಲವಾರು ಕೆಲಸಗಳಲ್ಲಿ ನೂರಾರು ಮಕ್ಕಳು ನಿರತರಾಗಿರುವುದು ನಗರ ಪ್ರದೇಶಗಳಲ್ಲಿ ಸಾಮಾನ್ಯ. ಹೊಟ್ಟೆ ತುಂಬಿಸಿಕೊಳ್ಳುವುದ್ಕಕಾಗಿ ಭಿಕ್ಷೆ ಮತ್ತಿತರ ಕಾರ್ಯದಲ್ಲಿಯೇ ನಿತ್ಯದ ಸಮಯ ಕಳೆಯುವ ಈ ಮಕ್ಕಳು ಅಕ್ಷರ ಜ್ಞಾನದ ಸಂಪರ್ಕಕ್ಕೇ ಬರುವುದಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಸಂಬಂಧಿಸಿದ ಇತರ ಇಲಾಖೆಗಳ ಅಧಿಕಾರಿಗಳು ತಿರುಗಾಡುವ ರಸ್ತೆಗಳಲ್ಲಿ ನಿತ್ಯ ಈ ಬಾಲ ಭಿಕ್ಷುಕರು ಕಾಣುತ್ತಾರೆ. ಆದರೂ ಈ ಮಕ್ಕಳ ಪಾಲಕರನ್ನು ಭೇಟಿಯಾಗಿ, ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವೊಲಿಸುವ ಕಾರ್ಯವನ್ನು ಯಾವೊಬ್ಬ ಅಧಿಕಾರಿಯೂ ಮಾಡದಿರುವುದು ಖೇದಕರ. ಭಿಕ್ಷಾಟನೆ ಹಾಗೂ ಹಲವಾರು ಕೆಲಸಗಳಲ್ಲಿ ನಿರತ ಶಿಕ್ಷಣ ವಂಚಿತ ಕೆಲ ಮಕ್ಕಳು 'ಕನ್ನಡಪ್ರಭ' ಪತ್ರಿಕೆ ಛಾಯಾಗ್ರಾಹಕ ಡಿ. ಹೇಮಂತ ಅವರ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.