ಬ್ರೇಕ್ ಫೇಲ್: ತಗ್ಗಿಗೆ ಇಳಿದ ಬಸ್
ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿದ ವಾಯವ್ಯ ಸಾರಿಗೆ ಸಂಸ್ಥೆಯ ಬಸ್ ರಸ್ತೆ ಪಕ್ಕದ ತಗ್ಗು ಪ್ರದೇಶಕ್ಕೆ ಇಳಿದ ಘಟನೆ ಮಂಗಳವಾರ ಹುಬ್ಬಳ್ಳಿ-ಧಾರವಾಡ ಮಧ್ಯದ ಅಮರಗೋಳ ಬಳಿ ನಡೆದಿದೆ. ಧಾರವಾಡದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಬಸ್, ನವನಗರ ಸಮೀಪದ ಅಮರಗೋಳ ನಿಲ್ದಾಣದ ಸಮೀಪ ಬರುತ್ತಿದ್ದಂತೆಯೇ ಮುಖ್ಯರಸ್ತೆಯಿಂದ ಕೆಳಗಿಳಿದಿದೆ. ಬಸ್ನ ಬ್ರೆಕ್ ಕೈಕೊಟ್ಟಿದ್ದೇ ಈ ಘಟನೆಗೆ ಕಾರಣವೆಂದು ಹೇಳಲಾಗಿದೆ. ಬಸ್ ಚಾಲಕನ ಮುಂಜಾಗ್ರತೆಯಿಂದ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದು, ಯಾರೊಬ್ಬರಿಗೂ ಗಾಯಗಳಾಗಿಲ್ಲ. ಮುಖ್ಯರಸ್ತೆ ಬಿಟ್ಟು ಕೆಳಗಿಳಿದ ಬಸ್ನ್ನು ನಂತರ ಕ್ರೇನ್ ಮೂಲಕ ಮೇಲಕ್ಕೆತ್ತಲಾಯಿತು.