ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಎಸ್ಸೆಸ್ಸಿ ಪರೀಕ್ಷೆಗೆ ಉ.ಕ. ಅಭ್ಯರ್ಥಿ ನಿರ್ಲಕ್ಷ್ಯ: ಎಸ್. ಗೋಪಾಲನ್

Lingaraj Badiger
Updated On : 1 Aug 2013, 11:52 am

ಧಾರವಾಡ: ಕೇರಳ ಮತ್ತು ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕದ ಅಭ್ಯರ್ಥಿಗಳು ಆಯೋಗದ ನೇಮಕಾತಿಯಲ್ಲಿ ಅರ್ಜಿಗಳನ್ನು ಹಾಕುವವರ ಸಂಖ್ಯೆ ತುಂಬಾ ಕಡಿಮೆ ಎಂದು ಸಿಬ್ಬಂದಿ ನೇಮಕಾತಿ ಆಯೋಗ (ಎಸ್ಸೆಸ್ಸಿ)ದ ಪ್ರಾದೇಶಿಕ ನಿರ್ದೇಶಕ ಎಸ್. ಗೋಪಾಲನ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಆಯೋಗದ ನೇಮಕಾತಿಗಳಲ್ಲಿ ದಕ್ಷಿಣ ಕರ್ನಾಟಕದಿಂದ ಶೇ. 80 ಅರ್ಜಿಗಳು ಬಂದರೆ, ಉತ್ತರ ಕರ್ನಾಟಕದಿಂದ ಕೇವಲ ಶೇ. 20ರಷ್ಟು ಬಂದಿರುತ್ತವೆ. ಆದರೆ, ಅರ್ಜಿದಾರರ ಪೈಕಿ ಸಾಕಷ್ಟು ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಗೆ ಹಾಜರಾಗುವುದಿಲ್ಲ. ಅಭ್ಯರ್ಥಿಗಳು ಸಂಬಳ ತೀರಾ ಕಡಿಮೆ ಇದೆ ಎಂದು ಭಾವಿಸಿದ್ದಾರೆ. ಈ ಹುದ್ದೆಗೆ ಆಯ್ಕೆಯಾದ ನಂತರ ಸಂಬಳ ಹೆಚ್ಚಾಗುತ್ತದೆ ಎಂಬ ಮಾಹಿತಿ ತಿಳಿದುಕೊಳ್ಳುವಲ್ಲಿ ಅಭ್ಯರ್ಥಿಗಳು ವಿಫಲರಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಹುದ್ದೆಗೆ ನೇಮಕಗೊಂಡರೂ ಸಾಕಷ್ಟು ಅಭ್ಯರ್ಥಿಗಳು ಕಚೇರಿಗೆ ಹಾಜರಾತಿ ನೀಡುತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಅರ್ಹ ಅಭ್ಯರ್ಥಿಗಳಿದ್ದು, ಹುದ್ದೆಗೆ ಮಾತ್ರ ಅರ್ಜಿ ಹಾಕುತ್ತಿಲ್ಲ ಎಂದು ತಿಳಿಸಿದರು. ಪ್ರಸ್ತುತ ರೋಜಗಾರ್ ಸಮಾಚಾರ್ 2013ರ ಜು. 20-26ರ ಸಂಚಿಕೆಯಲ್ಲಿ ಆಯೋಗವು ಸಾಮಾನ್ಯವಾಗಿ ಕಂಬೈನ್‌ಡ್ ಹೈಯರ್ ಸೆಕೆಂಡರಿ ಲೆವೆಲ್ ಪರೀಕ್ಷೆ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಆ. 16 ದಿನ. ಅಂದಾಜು ಮೂರು ಸಾವಿರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರದ ಸಚಿವಾಲಯ, ಇಲಾಖೆ, ಕಚೇರಿಗಳಲ್ಲಿ ಸಿ ಗುಂಪಿನ ಡಾಟಾ ಎಂಟ್ರಿ ಆಪರೇಟರ್, ಲೋಯರ್ ಡಿವಿಜನ್ ಕ್ಲರ್ಕ್ ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಸಲ್ಲಿಸಬಹುದು. ಅಲ್ಲದೇ, ಕಚೇರಿಯ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 94838-62020 ಸಂಪರ್ಕಿಸಬಹುದು ಎಂದು ಗೋಪಾಲನ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement