ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಖಾದಿ ಕ್ಷೇತ್ರಕ್ಕೆ ಬೆಳಕಾದ ವೆಂಕಟೇಶ ಮಾಗಡಿ

Lingaraj Badiger
Updated On : 1 Aug 2013, 11:46 am

ಹುಬ್ಬಳ್ಳಿ:  ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕದಲ್ಲಿ ಖಾದಿ ಇತಿಹಾಸ ಎರಡರಲ್ಲಿಯೂ ಅಚ್ಚಳಿಯದ ಹೆಸರು ವೆಂಕಟೇಶ ಮಾಗಡಿ. ಅವರು ಕಣ್ಮರೆಯಾಗಿ 2 ದಶಕಗಳು ಕಳೆದರೂ ರಾಷ್ಟ್ರಪಿತ ಗಾಂಧೀಜಿ ತತ್ವಗಳ ಮೂಲಕ ಇನ್ನೂ ಅವರು ನಮ್ಮ ನಡುವೆ ಇದ್ದಾರೆ.
ಬಡವರಿಗೆ ಆಸರೆಯಾಗಿ, ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಸ್ವಾಭಿಮಾನದ ಬೆಳಕು ಚೆಲ್ಲಿದ ಮಾಗಡಿ ಅವರ ಜೀವನ ಇಂದಿನ, ಮುಂದಿನ ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಮಾರ್ಗದರ್ಶಿ. ಸಮಾನ ಮನಸ್ಕರೊಡಗೂಡಿ ಖಾದಿ ಸಂಸ್ಥೆ, ಖಾದಿ ಫೆಡರೇಶನ್ ಸ್ಥಾಪಿಸಿದರು. ನಿಸರ್ಗ ಚಿಕಿತ್ಸಾ ಕೇಂದ್ರ ಆರಂಭಿಸಿ ಖಾದಿಗೆ ಕಸುವು ತುಂಬಿದರು.
ಪಾರ್ಕ್ ನಿರ್ಮಾಣ: ಬಾಗಲಕೋಟೆ ಜಿಲ್ಲೆಯ ಬರಪೀಡಿತ 27 ಗ್ರಾಮಗಳಲ್ಲಿ ಖಾದಿ ಕೇಂದ್ರಗಳನ್ನು, ಬೆಂಗಳೂರಿನಲ್ಲಿ ಖಾದಿ ಭಂಡಾರಗಳನ್ನು ತೆರೆದರು. ಈ ಎಲ್ಲ ಕೇಂದ್ರಗಳು ಸ್ವಂತ ಸೂರು, ವಿಶಾಲ ಜಾಗೆ ಹೊಂದಿವೆ. ಖಾದಿ ಕಸಬುದಾರರು, ಕಾರ್ಯಕರ್ತರಿಗೆ ಮನೆ ಕಟ್ಟಿಸಿದರು. ಹೀಗಾಗಿ ಬೆಂಗೇರಿಯಲ್ಲಿ ವೆಂಕಟೇಶ ಮಾಗಡಿ ಕಾಲನಿ ಹಾಗೂ ವೆಂಕಟೇಶ ಮಾಗಡಿ ಪಾರ್ಕ್ ನಿರ್ಮಾಣಗೊಂಡಿವೆ. ಮಾಗಡಿ ಅವರಿಗೆ ಖಾದಿ ಕ್ಷೇತ್ರ ಹಾಗೂ ಖಾದಿ ಕಸಬುದಾರರ ಬಗ್ಗೆಯೇ ಹೆಚ್ಚು ಚಿಂತೆ. ಖಾದಿಯಲ್ಲಿ ಹೊಸತನ ಬಂದರೆ ಅದನ್ನ್ನು ಫೆಡರೇಶನ್‌ದಲ್ಲಿ ತರುತ್ತಿದ್ದರು. ಡಿ.ಜಿ. ಮತ್ತಿಕೊಪ್ಪ, ಬಿ.ಎಸ್. ಪಾಟೀಲರ ಸಹಕಾರದಿಂದ ಮಾಗಡಿಯವರು ಸಾಲುಸಾಲಾಗಿ ಸಂಸ್ಥೆಗಳ್ನ ಕಟ್ಟಿದರು.  ಇವರಿಬ್ಬರೂ ಮಾಗಡಿ ಬಿಟ್ಟುಹೋದ ಆದರ್ಶ ಪರಂಪರ್ನೆ ಮುಂದುವರಿಸಿದರು. ಇವರಲ್ಲಿ ಬಿ.ಎಸ್. ಪಾಟೀಲರು ರಾಷ್ಟ್ರಧ್ವಜ ತಯಾರಿಸುವ ಕೇಂದ್ರವನ್ನ್ನು ಹುಬ್ಬಳ್ಳಿಯ ಬೆಂಗೇರಿಯಲ್ಲಿ ಸ್ಥಾಪಿಸಿದರು. ದೇಶದ ಖಾದಿ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದರು. ಸ್ವಾತಂತ್ರ್ಯ ಯೋಧರು ಕಣ್ಮರೆಯಾಗುತ್ತಿದ್ದಂತೆಯೇ ಖಾದಿ ಕ್ಷೇತ್ರದಲ್ಲಿಯೂ ದೇಶಭಕ್ತರು, ಪ್ರಾಮಾಣಿಕರೂ ಕಣ್ಮರೆಯಾದರು. ಹೀಗಾಗಿ ಖಾದಿ ಕ್ಷೇತ್ರ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ. ಗಾಂಧೀಜಿ ತತ್ವ ಆಧಾರಿತ ಖಾದಿ ಕ್ಷೇತ್ರಕ್ಕೆ ತನ್ನ್ನದೇ ಆದ ಘನತೆ ಗೌರವ ಇದೆ. ಅದನ್ನು ಕಾಪಾಡುವದು ಇಂದಿನ ಅವಶ್ಯಕತೆಯಾಗಿದೆ. ಭ್ರಷ್ಟರನ್ನು, ಖಾದಿ ಹೆಸರಿನಲ್ಲಿ ಖೊಟ್ಟಿ ಖಾದಿ ತಯಾರಿಸುವವರನ್ನ್ನು ಮಟ್ಟಹಾಕಬೇಕು. ಇದು ಸರಕಾರ ಮತ್ತು ಸಮಾಜದ ಜವಾಬ್ದಾರಿ.
ಇಂದು 22ನೇ ಪುಣ್ಯಸ್ಮರಣೆ
ಸ್ವಾತಂತ್ರ್ಯ ಯೋಧ ವೆಂಕಟೇಶ ಮಾಗಡಿ ಅವರ 22ನೇ ಪುಣ್ಯಸ್ಮರಣೆ ಆ.1ರಂದು ಬೆಳಗ್ಗೆ 11ಕ್ಕೆ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ನಡೆಯಲಿದೆ.  ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘಗಳ ಸಲಹಾ ಸಮಿತಿ ಅಧ್ಯಕ್ಷ ನಾಡೋಜ ಡಾ೤ ಪಾಟೀಲ ಪುಟ್ಟಪ್ಪ ಉದ್ಘಾಟಿಸುವರು. ಶಾಸಕ ಜೆ.ಟಿ. ಪಾಟೀಲ, ಖ್ಯಾತ ಉದ್ದಿಮೆದಾರ ಬಸಂತಕುಮಾರ ಪಾಟೀಲ ನಿವೃತ್ತ ಸುಪರಿಟೆಂಡೆಂಟ್ ಎಂಜಿನಿಯರ್ ರಮೇಶ ಜಂಗಲ, ಫೆಡರೇಶನ್ ಅಧ್ಯಕ್ಷ, ಕೆ.ವಿ. ಪತ್ತಾರ, ವಿ.ಜಿ. ಮತ್ತಿಕೊಪ್ಪ, ಫೆಡರೇಶನ್ ಉಪಾಧ್ಯಕ್ಷ ಬಿ.ಟಿ. ಬೆಟಗೇರಿ, ನಿವೃತ್ತ ಡಿಡಿಪಿಐ ಅಕ್ಕಮಹಾದೇವಿ ಮಾಗಡಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಮದನ ದೇಸಾಯಿ ಅಧ್ಯಕ್ಷತೆ ವಹಿಸುವರು.


ಖಾದಿ ಫೆಡರೇಶನ ಹೆಮ್ಮರವಾಗಿ ಬೆಳೆಯಬೇಕಾಗಿತ್ತು. ಬಿ.ಎಸ್. ಪಾಟೀಲರ ನಿಧನಾ ನಂತರ ಕೆಲ ಭ್ರಷ್ಟರಿಂದ ಫೆಡರೇಶನ ಅಧೋಗತಿಗೆ ಇಳಿದಿತ್ತು. ಡಾ. ಪಾಟೀಲ ಪುಟ್ಟಪ್ಪ ಸಕಾಲದಲ್ಲಿ ಮಧ್ಯ ಪ್ರವೇಶಿಸಿ ಭ್ರಷ್ಟರನ್ನ್ನು ಹೊರಹಾಕಿ ಸಂಸ್ಥೆ ಕಾಪಾಡಿದ್ದಾರೆ. ಮಾಗಡಿ ಅವರು ಆರಂಭಿಸಿದ ಹಲವಾರು ವರ್ಷಗಳಿಂದ ಮುಚ್ಚಿದ ಗ್ರಾಮೋದ್ಯೋಗ ಘಟಕಗಳು ಈಗ ಮತ್ತೆ ಪುನರಾಂಭಗೊಂಡಿವೆ. ಸಾಬೂನು, ವಾಶಿಂಗ್ ಪೌಡರ್, ಕ್ಲೀನಿಂಗ್ ಪೌಡರ್, ಪಿನಾಯಿಲ್ ಘಟಕಗಳು ಪುನರಾಂಭಗೊಂಡಿವೆ.
- ಉಮೇಶ ಬಳಿಗಾರ, ಸಂಚಾಲಕ
ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘಗಳ ಸಲಹಾ ಸಮಿತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement