ಸಿ.ಪಿ. ಮಾಯಾಚಾರಿ ಅಧಿಕಾರ ಸ್ವೀಕಾರ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 31
ಹುಬ್ಬಳ್ಳಿಯ ರಾಜ್ಯ ಸಮಾಚಾರ ಕೇಂದ್ರದ ಹಿರಿಯ ಸಹಾಯಕ ನಿರ್ದೇಶಕರಾಗಿ ಚಿದಾನಂದ ಮಾಯಾಚಾರಿ ಅವರು ಬುಧವಾರ ಅಧಿಕಾರ ವಹಿಸಿಕೊಂಡರು.
ಮಾಯಾಚಾರಿ ಅವರು ಇದಕ್ಕೂ ಮುನ್ನ ಹಾವೇರಿ ಜಿಲ್ಲಾ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸರ್ಕಾರ ಅವರಿಗೆ ಹಿರಿಯ ಸಹಾಯಕ ನಿರ್ದೇಶಕರಾಗಿ ಮುಂಬಡ್ತಿ ನೀಡಿ ಹುಬ್ಬಳ್ಳಿಗೆ ರಾಜ್ಯ ಸಮಾಚಾರ ಕೇಂದ್ರದ ಹಿರಿಯ ಸಹಾಯಕ ನಿರ್ದೇಶಕ ಎಂದು ನೇಮಕ ಮಾಡಿದೆ.
ಪಿ.ಎಸ್. ಪರ್ವತಿ ಅವರ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಮಾಯಾಚಾರಿ ಅವರು ನೇಮಕಗೊಂಡಿದ್ದಾರೆ.
ಧಾರವಾಡ ಜಿಲ್ಲಾ ವಾರ್ತಾ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕರಾಗಿಯೂ ಮಾಯಾಚಾರಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
--
ಮುಸ್ಲಿಂ ಬಾಂಧವರಿಗೆ ಇಫ್ತಿಯಾರ್ ಕೂಟ
ಕುಂದಗೋಳ: ಇಲ್ಲಿನ ದೇಶಪಾಂಡೆ ಓಣಿಯ ಮಾಮುಜಲಿ ದರ್ಗಾದಲ್ಲಿ ರಂಜಾನ್ ಹಬ್ಬದ ನಿಮಿತ್ತ ಪಟ್ಟಣದ ಮುಸ್ಲಿಂ ಬಾಂಧವರಿಗಾಗಿ ಇಫ್ತಿಯಾರ್ ಕೂಟವನ್ನು ಏರ್ಪಡಿಸಲಾಯಿತು.
ಕೂಟವನ್ನು ರೋಜಾ (ಉಪವಾಸ) ಮಾಡುವ ಪ್ರತಿಯೊಬ್ಬ ಮುಸ್ಲಿಂ ಬಾಂಧವರಿಗಾಗಿ ಏರ್ಪಡಿಸಿದ್ದು, ಅವರು ಇಲ್ಲಿ ಭಾಗವಹಿಸಿ ಕೂಟದ ಸವಿಯನ್ನು ಸವಿದು ಅಂದಿನ ಒಂದು ದಿನದ ತಮ್ಮ ರೋಜಾವನ್ನು ಮುಕ್ತಾಯಗೊಳಿಸುತ್ತಾರೆ. ಅದರಂತೆ ಮರುದಿನ ಮತ್ತೆ ರೋಜಾ ಮಾಡುತ್ತಾರೆ ಎಂದು ಯುವ ಕಾಂಗ್ರೆಸ್ ಮುಖಂಡ ಹೈದರಸಾಬ ಹಸೂಬಾಯಿ ಹೇಳಿದರು. ಕೂಟದಲ್ಲಿ ಸಲೀಂ ಸುಂಖದ, ಖಾದರಸಾಬ ನರಗುಂದ, ನಜೀರಸಾಬ ಅಣ್ಣೀಗೇರಿ, ಮಾಬೂಲಿ ಹಸೂಬಾಯಿ, ಅಲ್ಲಾಭಕ್ಷ ಅಣ್ಣಿಗೇರಿ, ಬುಡ್ಡೇಸಾಬ ಹಸೂಬಾಯಿ, ಜಾಫರಸಾಬ ಹಿಂಡಸಗೇರಿ ಸೇರಿದಂತೆ ನೂರಾರು ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.