ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಧಾರವಾಡ: ಮತ್ತೆ ನೆಲಕ್ಕುರುಳಿದ ವಿದ್ಯುತ್ ಕಂಬಗಳು

Vishwanath S
Updated On : 2 Jun 2013, 12:06 pm

ಧಾರವಾಡ: ಶನಿವಾರ ಬೆಳ್ಳಂಬೆಳಗ್ಗೆ ಸುಮಾರು ಎರಡು ಗಂಟೆ ಇಡೀ ಜಿಲ್ಲಾದ್ಯಂತ ಬಿರುಸಾದ ಗಾಳಿಯುತ ಮಳೆಯಾಗಿದೆ. ತಾಲೂಕಿನ ಯಾದವಾಡ ರಸ್ತೆಯಲ್ಲಿ ಗಾಳಿ-ಮಳೆಯ ಹೊಡೆತಕ್ಕೆ ಇತ್ತೀಚೆಗೆ ನೆಲಕ್ಕೆ ಉರುಳಿದ್ದ ವಿದ್ಯುತ್ ಕಂಬಗಳು ಈ ಗಾಳಿಯುತ ಮಳೆಗೆ ಮತ್ತೆ ನೆಲಕ್ಕೆ ಬಿದ್ದಿವೆ.
ಕಳೆದ ಮೇ 20ರಂದು ಗಾಳಿ-ಮಳೆಯಿಂದಾಗಿ ಸಾಲು ಸಾಲಾಗಿ ಎಂಟರಿಂದ ಹತ್ತು ವಿದ್ಯುತ್ ಕಂಬಗಳು ರಸ್ತೆಯಲ್ಲಿಯೇ ಬಿದ್ದಿದ್ದವು. ಕಂಬಗಳು ಬಿದ್ದು ನಾಲ್ಕು ದಿನಗಳಾದರೂ ಹೆಸ್ಕಾಂ ಅಧಿಕಾರಿಗಳು ಈ ಕಡೆ ಮುಖ ಮಾಡಿರಲಿಲ್ಲ. ಮಾಧ್ಯಮಗಳಲ್ಲಿ ಬಂದ ಸುದ್ದಿಯಿಂದ ಎಚ್ಚೆತ್ತುಗೊಂಡ ಹೆಸ್ಕಾಂ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮೇ 25ರಂದು ಈ ಕಂಬಗಳನ್ನು ಸರಿಪಡಿಸಿದ್ದರು. ಆದರೆ, ಶನಿವಾರ ಬೆಳ್ಳಂಬೆಳಗ್ಗೆ ಗಾಳಿಯುತ ಮಳೆಗೆ ಅದೇ ಕಂಬಗಳು ಮತ್ತೆ ನೆಲಕ್ಕೆ ಉರುಳಿದ್ದು, ಹೆಸ್ಕಾಂ ನಿರ್ಲಕ್ಷ್ಯವನ್ನು ಮತ್ತೊಮ್ಮೆ ಬಯಲಿಗೆ ತಂದಂತಾಗಿದೆ.
ಕೆಲ ತಿಂಗಳ ಹಿಂದೆಯಷ್ಟೇ ಯಾದವಾಡ ರಸ್ತೆಯ ಪಕ್ಕದಲ್ಲಿ ವಿದ್ಯುತ್ ಕಂಬಗಳನ್ನು ಹಾಕಲು ಆಂಧ್ರ ಮೂಲದ ರ್ಯಾಂಕಿ ಎನ್ನುವ ಸಂಸ್ಥೆ ಗುತ್ತಿಗೆ ಪಡೆದಿತ್ತು. ಕಂಬಗಳನ್ನು ಅವೈಜ್ಞಾನಿಕವಾಗಿ ಹಾಕಿದ್ದರಿಂದಲೇ ಪದೇಪದೇ ಈ ಕಂಬಗಳು ಬೀಳುತ್ತಿದ್ದು, ರಸ್ತೆ ಬದಿಯೇ ಈ ಘಟನೆ ನಡೆಯುತ್ತಿದೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ನಿರಂತರ ವಿದ್ಯುತ್ ಹರಿಯುತ್ತಿರುವ ಈ ಕಂಬಗಳಿಂದ ಅನಾಹುತ ತಪ್ಪಿದ್ದಲ್ಲ. ಕಪ್ಪು ಮಣ್ಣು ಇರುವ ಹೊಲಗಳ ಬದುವಿನಲ್ಲಿ ಈ ಕಂಬಗಳನ್ನು ನೆಟ್ಟಿದ್ದು, ಗಟ್ಟಿಮುಟ್ಟಾದ ಬುನಾದಿ ತೆಗೆದು ಕಾಂಕ್ರೀಟ್ ಮಾಡುವ ಮೂಲಕ ಕಂಬಗಳನ್ನು ನಿಲ್ಲಿಸಬೇಕಿದೆ ಎನ್ನುವುದು ಸ್ಥಳೀಯರಾದ ಮಲ್ಲನಗೌಡ ಪಾಟೀಲರ ಆಗ್ರಹ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement