ಬೆಳೆಸಾಲ ಸ್ಕೀಂ ಜಾರಿಗೊಳಿಸಿ
ಧಾರವಾಡ: ರಾಜ್ಯ ಸರ್ಕಾರ ಘೋಷಣೆಗೊಳಿಸಿದ 2 ಲಕ್ಷ ಶೂನ್ಯ ಬಡ್ಡಿ ದರ ಹಾಗೂ 5 ಲಕ್ಷ ಶೇ. 3ರ ಬಡ್ಡಿ ದರದಲ್ಲಿ ಬೆಳೆಸಾಲ ನೀಡುವ ಯೋಜನೆಯನ್ನು ಇದೇ ವರ್ಷ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ ಘಟಕ ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಸತತ ಬರಗಾಲ ಎದುರಿಸಿದ ರೈತ ಸಮುದಾಯದಲ್ಲಿ ಇದೀಗ ಮುಂಗಾರು ಬಿತ್ತನೆಗೆ ಬೇಕಾದಷ್ಟೂ ಹಣ ಇಲ್ಲ. ಆದರೆ, ಈ ಬಾರಿ ಆಶಾದಾಯಕ ಮಳೆಯಾಗುತ್ತಿದ್ದು, ರೈತರು ಬಿತ್ತನೆಗೆ ಸಜ್ಜಾಗಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ರೈತರಿಗೆ ರೈತರಿಗೆ ಬೆಳೆಸಾಲ ಸೌಲಭ್ಯವನ್ನು ಇದೇ ವರ್ಷ ಒದಗಿಸಿಕೊಡಬೇಕು. ಅಲ್ಲದೇ, ಸಬ್ಸಿಡಿ ದರದಲ್ಲಿ ಎಲ್ಲ ಬೀಜ ಹಾಗೂ ಗೊಬ್ಬರ ಪ್ರತಿಯೊಂದು ಹಳ್ಳಿಗಳ ಸಹಕಾರಿ ಸೊಸೈಟಿಗಳಲ್ಲಿ ಲಭ್ಯವಾಗುವಂತೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಶಶಿ ಕುಲಕರ್ಣಿ, ಕಲಂದರ ಮುಲ್ಲಾ, ಭೀಮಪ್ಪ ಕಸಾಯಿ, ಪ್ರಭು ಹಡಪದ, ಸಿದ್ದು ಕಂಬಾರ, ಯಲ್ಲಪ್ಪ ಮುಮ್ಮಿಗಟ್ಟಿ, ಬಸವರಾಜ ಗುಡೆಣ್ಣವರ, ರಾಮನಗೌಡ ಪಾಟೀಲ, ಮಲ್ಲನಗೌಡ ಪಾಟೀಲ ಇದ್ದರು.