ಸುದ್ದಿ ಸಂಕ್ಷೇಪ
ಧಾರವಾಡ: ಅಧಿಕಾರೇತರ ನಾಮನಿರ್ದೇಶನ ರದ್ದು
ಧಾರವಾಡ: ಸಹಕಾರ ಸಂಘಗಳ ಕಾಯ್ದೆ ಪ್ರಕರಣ 29 ಹಾಗೂ 53ಎ ಗಳನ್ನು ಕಳೆದ ಫೆಬ್ರವರಿ 2ರ ತಿದ್ದುಪಡಿ ಅನ್ವಯ ಕೈಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಅಧಿಕಾರೇತರ ನಾಮನಿರ್ದೇಶನಗಳನ್ನು ರದ್ದುಪಡಿಸಿ ಸಹಕಾರ ಇಲಾಖೆ ಆದೇಶ ಹೊರಡಿಸಿದೆ. ಇದನ್ನು ಜಿಲ್ಲೆಯಲ್ಲಿನ ಎಲ್ಲ ಸಹಕಾರ ಸಂಘಗಳು ಗಮನಿಸಲು ಸಹಕಾರ ಸಂಘಗಳ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಪ್ರೋ: ಇಂದು ನೇಮಕಾತಿ ಆದೇಶ
ಧಾರವಾಡ: ಇಲ್ಲಿನ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಸ್ನಾತಕೊತ್ತರ ಅಧ್ಯಯನ ಸಂಸ್ಥೆಯಲ್ಲಿ ಜೂ. 4ರ ಬೆಳಗ್ಗೆ 10.30ಕ್ಕೆ ಉತ್ತರ ಕರ್ನಾಟಕದ ವಿವಿಧ ಕಾಲೇಜುಗಳಿಂದ ವಿಪ್ರೋ ಕಂಪನಿಗೆ ಆಯ್ಕೆಯಾದ 157 ವಿದ್ಯಾರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ವಿವಿಮೌಲ್ಯಮಾಪನ ಕುಲಸಚಿವ ಡಾ. ಕೆ.ಆರ್. ದುರ್ಗಾದಾಸ್ ಅತಿಥಿಗಳಾಗಿ ಆಗಮಿಸಲಿದ್ದು, ಕಾಲೇಜಿನ ಪ್ರಾಚಾರ್ಯ ಡಾ. ಅಜಿತ ಪ್ರಸಾದ ಅಧ್ಯಕ್ಷತೆ ವಹಿಸಲಿದ್ದಾರೆಂದು ಮಹಾವೀರ ಉಪಾಧ್ಯೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಓಂ ಶಾಲೆಯ ಮಕ್ಕಳಿಂದ ಪರಿಸರ ಜಾಗೃತಿ
ಧಾರವಾಡ: ಓಂ ಶಾಲೆಯ ಮಕ್ಕಳು ಹಾಗೂ ಗ್ರೀನ್ ಆರ್ಮಿ ತಂಡ ಜಂಟಿಯಾಗಿ ಪರಿಸರ ಸಪ್ತಾಹ 2013ರ ಅಂಗವಾಗಿ ಪರಿಸರ ಜನಜಾಗೃತಿ ಜಾಥ ನಡೆಸಿತು. ಇಲ್ಲಿನ ಕೆಲಗೇರಿಯಲ್ಲಿರುವ ಶಾಲೆಯಿಂದ ಪ್ರಾರಂಭವಾದ ಈ ಪರಿಸರ ಜನಜಾಗೃತಿ ಜಾಥಾ ಶ್ರೀನಗರದವರೆಗೆ ನಡೆಯಿತು. ಈ ಸಂದರ್ಭದಲ್ಲಿ ಗ್ರೀನ್ ಆರ್ಮಿ ತಂಡದ ಅಧ್ಯಕ್ಷ ಪ್ರಕಾಶ ಗೌಡರ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಬಲರಾಮ ಕುಸುಗಲ್, ಕವಿವಿ ಗಾಂಧಿ ಅಧ್ಯಯನ ಪೀಠದ ಪ್ರೊ. ಶಿವಾನಂದ ಶೆಟ್ಟರ, ಬಸವರಾಜ ಯಗಟಿಮಠ, ನಂದೀಶ ಕಡಕೋಳ, ರೂಪಾಲಿ ಆವರಗೇರಿಮಠ, ನೀಲಾ ಕಲ್ಯಾಣಿ, ಮಧುಮತಿ ಹೂಗಾರ, ಜಯಶ್ರೀ ಅತ್ತಿಗೇರಿ, ಪ್ರತಿಭಾ ಕುಸುಗಲ್, ರೂಪಾ, ಪ್ರಮೋದಿನಿ, ಚಂದ್ರಶೇಖರ ಪೂಜಾರ ಪಾಲ್ಗೊಂಡಿದ್ದರು.
ಸಂಘ ಉದ್ಘಾಟನೆ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಕನಕ ಅಧ್ಯಯನ ಪೀಠದ ಸ್ನಾತಕೋತ್ತರ ಡಿಪ್ಲೋಮಾ ಕೋರ್ಸ್ನ ಹಳೆಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಸಂಭ್ರಮದಿಂದ ನಡೆಯಿತು. ಈ ಸಂದರ್ಭದಲ್ಲಿ ಡಾ. ಬಿ.ವಿ. ಯಕ್ಕುಂಡಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಎಚ್.ಎಚ್. ನದಾಫ್, ಡಾ. ಎಂ.ಎನ್. ಚಲವಾದಿ, ಡಾ. ಸಿ.ಡಿ. ದೊಡ್ಡಮನಿ, ಎನ್.ಡಿ. ಲಕ್ಕಣ್ಣವರ, ರತ್ನಮ್ಮ, ಚನ್ನಮ್ಮ ತಳವಾರ ಇದ್ದರು.
ಪಾರ್ವತಿಬಾಯಿ ನಿಧನ
ಧಾರವಾಡ: ಇಲ್ಲಿನ ಲೈನ್ಬಜಾರದ ಸಲಗರ ಚಾಳ ನಿವಾಸಿ ಪಾರ್ವತಿಬಾಯಿ ಶಿವಾಜಿರಾವ್ ಪಾಟೀಲಕುಲಕರ್ಣಿ (67) ಭಾನುವಾರ ನಿಧನರಾದರು. ಮೃತರಿಗೆ ಪತಿ, ಪುತ್ರ, ಮೂವರು ಪುತ್ರಿಯರಿದ್ದಾರೆ.