ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅಳಿದುಳಿದ ಗುಬ್ಬಿಗಳ ಉಳಿಸುವ ಕಾರ್ಯವಾಗಲಿ

Mainashree
Updated On : 5 Jun 2013, 11:19 am

ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 4
ಯಾರ ಮನೆಯಲ್ಲಿ ಗುಬ್ಬಿಗಳು ಇರುತ್ತವೆಯೋ ಅವರ ಮನೆ ಹಾಗೂ ಸುತ್ತಲಿನ ವಾತಾವರಣ ಶುದ್ಧವಿರುತ್ತದೆ ಎಂದು ಪಕ್ಷಿ ತಜ್ಞ ಆರ್.ಜಿ. ತಿಮ್ಮಾಪುರವರು ಹೇಳಿದರು.
ಇಲ್ಲಿನ ಗ್ರೀನ್ ಆರ್ಮಿ ಹಾಗೂ ಓಂ ಆಂಗ್ಲ ಮಾಧ್ಯಮ ಶಾಲೆ ಜಂಟಿಯಾಗಿ ನಡೆಸಿದ ಪರಿಸರ ಸಪ್ತಾಹದ ಅಂಗವಾಗಿ ಗುಬ್ಬಿಯೆ ಮರಳಿ ಬಾ ಗೂಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುಬ್ಬಿಗಳು ಪ್ರಸ್ತುತ ಉಪಯೋಗಿಸುವ ಆಹಾರ ಪದ್ಧತಿ, ಸಿರಿಧಾನ್ಯಗಳ ಕೊರತೆ, ರಾಸಾಯನಿಕ ಮಿಶ್ರಿತ ನೀರು ಹಾಗೂ ಮೊಬೈಲ್ ತರಂಗಗಳಿಂದ ಸಾಮಾನ್ಯ ಗುಬ್ಬಿ ಸಂಕುಲ ನಶಿಸಿ ಹೋಗಿದೆ. ಅಳಿದುಳಿದ ಕೆಲವೇ ಗುಬ್ಬಿಗಳು ಉಳಿದುಕೊಂಡಿವೆ. ಅವುಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.
ಜೀವನ ಶೈಲಿ ರೂಪಿಸಿಕೊಳ್ಳಿ: ಡಾ. ಧೀರಜ ವೀರನಗೌಡರ ಮಾತನಾಡಿ, ಈ ಭೂಮಿ ನಮ್ಮದಲ್ಲ, ನಮಗಿಂತಲೂ ಮುಂಚಿನ ಪ್ರಾಣಿಪಕ್ಷಿಗಳ ಸಂಕುಲದ್ದು. ಆದರೆ ಮಾನವನ ವಿಕಾಸವಾದಾಗಿನಿಂದ ಉಳಿದ ಪ್ರಾಣಿ, ಪಕ್ಷಿ ಮತ್ತು ಸಸ್ಯ ಸಂಕುಲ ಅಳಿವಿನ ಹಾದಿಯಲ್ಲಿದ್ದು, ಅವುಗಳಿಗೆ ಧಕ್ಕೆಯಾಗದಂತೆ ನಮ್ಮ ಜೀವನ ಶೈಲಿಯನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು. ಗ್ರೀನ್ ಆರ್ಮಿ ಅಧ್ಯಕ್ಷ ಪ್ರಕಾಶ ಗೌಡರ ಮಾತನಾಡಿ, ಗುಬ್ಬಿ ಉಳಿವಿಗಾಗಿ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ.
ಪ್ರಸ್ತುತ ಓಂ ಶಾಲಾ ಮಕ್ಕಳಿಂದ 50 ಗುಬ್ಬಿ ಗೂಡುಗಳನ್ನು ನಿರ್ಮಿಸಿದ್ದಾರೆ. ಮೊದಲು ವಿದ್ಯಾರಣ್ಯ ಬುರ್ಲಗಟ್ಟಿ ಎಂಬ ಯುವಕ ನಿರ್ಮಿಸಿ ಯಶಸ್ವಿಯಾಗಿ ಗುಬ್ಬಿ ಬರುವ ಹಾಗೇ ಈ ಗುಬ್ಬಿ ಗೂಡನ್ನು ನಿರ್ಮಿಸಿದ್ದರು. ಅದನ್ನೇ ಇದೀಗ ಗ್ರೀನ್ ಆರ್ಮಿ ಈ ಬಾರಿ ಶಾಲಾ ಮಕ್ಕಳಿಂದಲೇ ನಿರ್ಮಿಸಿದ ಗುಬ್ಬಿ ಗೂಡುಗಳನ್ನು ಅವರಿಗೇ ನೀಡಿ ಅವರ ಮನೆಯಲ್ಲಿ ಅವುಗಳನ್ನು ಹಾಕಿ, ಅದರ ಫಲಿತಾಂಶವನ್ನು ನೋಡಿ ಈ ಪ್ರಯೋಗ ಯಶಸ್ವಿಗೊಂಡಲ್ಲಿ ನಂತರ ಈ ಗುಬ್ಬಿ ಗೂಡುಗಳನ್ನು ಮನೆಮನೆಗೂ ತಲುಪಿಸುವ ಯೋಚನೆ ಹೊಂದಿದೆ ಎಂದು ಹೇಳಿದರು.
ಶಾಲಾ ಸಂಸ್ಥಾಪಕ ಬಸವರಾಜ ಯಗಟ್ಟಿಮಠ ಮಾತನಾಡಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ರೂಪಾಲಿ ಅವರಗೇರಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಂದೀಶ ಕಡಕೋಳ, ಪ್ರತಿಭಾ ಕುಸುಗಲ್ಲ, ಶ್ರೀದೇವಿ ಜಡಿ, ಪ್ರಮೋದಿನಿ ಹೀರೇಮಠ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement