ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕನಸು ನನಸು

Mainashree
Updated On : 5 Jun 2013, 11:19 am

ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 4
ಹಲವು ದಶಕಗಳ ಹೋರಾಟದ ಫಲವಾಗಿ ಉತ್ತರ ಕರ್ನಾಟಕ ಭಾಗದ ಧಾರವಾಡದಲ್ಲಿ 2008 ಜುಲೈ 4ರಂದು ಆರಂಭಗೊಂಡ ಹೈಕೋರ್ಟ್ ಸಂಚಾರಿ ಪೀಠ ಕಾಯಂಗೊಳ್ಳಬೇಕು ಎನ್ನುವುದು ಪ್ರತಿಯೊಬ್ಬರ ಅಪೇಕ್ಷೆಯಾಗಿತ್ತು.
ಪ್ರಸ್ತುತ ಕೇಂದ್ರ ಸಚಿವ ಸಂಪುಟ ಮಂಗಳವಾರ ಮಹತ್ವದ ನಿರ್ಣಯವೊಂದನ್ನು ತೆಗೆದುಕೊಳ್ಳುವ ಮೂಲಕ ಧಾರವಾಡ ಮತ್ತು ಗುಲ್ಬರ್ಗಾ ಸಂಚಾರಿ ಪೀಠಗಳನ್ನು ಕಾಯಂಗೊಳಿಸಲು ತೀರ್ಮಾನಿಸಿರುವುದು ಈ ಭಾಗದ ವಕೀಲರ ಹಾಗೂ ಜನಸಾಮಾನ್ಯರಲ್ಲಿ ಸಂತಸ ಮೂಡಿಸಿದೆ.
ಶೀಘ್ರ ವಿಲೇವಾರಿ: ಇದುವರೆಗೆ ಪ್ರತಿ ತಿಂಗಳು ನ್ಯಾಯಮೂರ್ತಿಗಳು ಸರದಿ ಆಧಾರದ ಮೇಲೆ ಕಲಾಪಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇದರಿಂದಾಗಿ ನ್ಯಾಯದಾನ ಪ್ರಕ್ರಿಯೆಗೆ ಸ್ವಲ್ಪ ಮಟ್ಟಿಗೆ ಅಡೆತಡೆ ಉಂಟಾಗುತ್ತಿತ್ತು. ಸಂಚಾರಿ ಪೀಠ ಕಾಯಂ ಪೀಠವಾಗಿ ಪರಿವರ್ತನೆ ಹೊಂದುವುದರಿಂದ ನ್ಯಾಯಮೂರ್ತಿಗಳು ಪೂರ್ಣ ಪ್ರಮಾಣದಲ್ಲಿ ನ್ಯಾಯದಾನ ನಡೆಸಲು ಈ ಮೂಲಕ ಸಾಧ್ಯವಾಗುವುದರಿಂದ ಪ್ರಕರಣಗಳ ಶೀಘ್ರ ವಿಲೇವಾರಿ ಆಗಲಿದೆ. ಜೊತೆಗೆ ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳು ದಾಖಲಾಗಲು ಸಾಧ್ಯ. ಇದು ಉನ್ನತ ನ್ಯಾಯಾಲಯದ ವಿಕೇಂದ್ರೀಕರಣದ ನಿಟ್ಟಿನಲ್ಲಿ ಮಹತ್ತದ ಹೆಜ್ಜೆ. ಜನಸಾಮಾನ್ಯರ ಮೂಲಭೂತ ಹಕ್ಕುಗಳ ಜಾರಿ ಇದರಿಂದ ಸುಗಮವಾಗಲಿದೆ. ಎರಡೂವರೆ ದಶಕದ ನಮ್ಮ ಹೋರಾಟಕ್ಕೆ ಸಾರ್ಥಕತೆ ಕಂಡುಕೊಂಡಂತಾಗಿದೆ. ಈ ಪೀಠದಿಂದ ನ್ಯಾಯಾಧೀಶರ ಸಂಖ್ಯೆ ಹೆಚ್ಚಳ, ಪ್ರಕರಣ ವಿಲೇವಾರಿ ತ್ವರಿತ, ಜತೆಗೆ ಕಂಪನಿ ದಾವೆಗಳ ವಿಚಾರಣೆ ನಡೆಸಬಹುದು. ಹಸಿರು ಪೀಠದ ಹೆಸರಿನಲ್ಲಿ ಕೆಲವಷ್ಟು ಪರಿಸರ ಸಂಬಂಧಿಸಿದ ಪ್ರಕರಣಗಳು ಬೆಂಗಳೂರಿಗೆ ವರ್ಗಾಯಿಸಲಾಗಿದ್ದು, ಕಾಯಂ ಪೀಠವಾದರೆ ಇವೆಲ್ಲ ಮರಳಿ ಧಾರವಾಡಕ್ಕೆ ಬರಲಿವೆ. ಬರೀ ಹೈಕೋರ್ಟ್ ಪೀಠ ಸ್ಥಾಪನೆಯಿಂದ ಮನೆ ಬಾಗಿಲಿಗೆ ನ್ಯಾಯ ಸಿಕ್ಕಂತಲ್ಲ. ಜತೆಗೆ ಸಹಕಾರ, ಸೇವೆ, ಟ್ಯಾಕ್ಸ್, ಅಬಕಾರಿ ಅಂತಹ ವಿವಿಧ ನ್ಯಾಯ ಮಂಡಳಿಗಳು ಸಹ ಈ ಪೀಠದಲ್ಲಿ ಸ್ಥಾಪನೆಯಾಗಬೇಕು ಎಂದು ಹಿರಿಯ ವಕೀಲ ಬಸವಪ್ರಭು ಹೊಸಕೇರಿ ಅವರ ಆಗ್ರಹ.
ಒಟ್ಟಿನಲ್ಲಿ ಸಂಚಾರಿ ಪೀಠವನ್ನು ಕಾಯಂ ಪೀಠವಾಗಿಸಲು ಸಚಿವ ಸಂಪುಟ ನಿರ್ಣಯಿಸಿದ್ದು, ಆದಷ್ಟು ಬೇಗ ಅದು ಕಾರ್ಯರೂಪಕ್ಕೆ ಬರಬೇಕಿದೆ. 2008ರಲ್ಲಿ ಈ ಸಂಚಾರಿ ಪೀಠವನ್ನು ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದರು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿರಿಯಾಕ ಜೋಸೆಫ್ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments