ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಾಮಗಾರಿ: ಸಂಚಾರ ಅಸ್ಯವ್ಯಸ್ತ

Mainashree
Updated On : 5 Jun 2013, 11:17 am

ಹುಬ್ಬಳ್ಳಿ: ಮುಖ್ಯ ರಸ್ತೆ ಮಧ್ಯೆ ನಡೆದ ಒಳಚರಂಡಿ ಕಾಮಗಾರಿಯಿಂದಾಗಿ ಮಂಗಳವಾರ ದಿನವಿಡಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡ ಘಟನೆ ಇಲ್ಲಿಯ ವಿದ್ಯಾನಗರದಲ್ಲಿ ಜರುಗಿತು.
ಬೆಳಗ್ಗೆಯಿಂದಲೇ ಪ್ರಾರಂಭಗೊಂಡ ಕಾಮಗಾರಿ ಇಡಿ ದಿನ ಮುಂದುವರೆಯಿತು. ಕಾಮಗಾರಿ ಹಿನ್ನೆಲೆಯಲ್ಲಿ ವಿದ್ಯಾನಗರದ ಶುಷ್ರುತಾ ಆಸ್ಪತ್ರೆ ಎದುರಿನ ರಸ್ತೆಯಿಂದ ಕಿಮ್ಸ್ ವೃತ್ತದವರೆಗಿನ ರಸ್ತೆಯನ್ನು ಒನ್‌ವೇ ಮಾಡಲಾಗಿತ್ತು. ಇದರಿಂದಾಗಿ ಎರಡೂ ಬದಿಯ ಸುಮಾರು ಒಂದು ಕಿ.ಮೀ. ಉದ್ದದವರೆಗೆ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು.
ಏಕಕಾಲಕ್ಕೆ ಎರಡು ಬಸ್‌ಗಳು ರಸ್ತೆ ಮಧ್ಯೆ ಬಂದಾಗ ಮುಂದೆ ಸಾಗಲು ಪರದಾಡಬೇಕಾಯಿತು. ಸುಮಾರು 300-400 ಮೀಟರ್ ಉದ್ದದ ರಸ್ತೆ ದಾಟಲು ಅರ್ಧ ತಾಸಿಗೂ ಹೆಚ್ಚು ಸಮಯ ಬೇಕಾಯಿತು. ಬೈಕ್ ಸವಾರರು ಸರಳವಾಗಿ ಸಾಗುತ್ತಿದ್ದರೆ ಕಾರು, ಬಸ್ ಹಾಗೂ ಮತ್ತಿತರ ವಾಹನಗಳು ಮಧ್ಯೆ ಮಧ್ಯೆ 10-15 ನಿಮಿಷ ನಿಂತು ಸಾಗುತ್ತಿದ್ದವು. ಇದರಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಬೇಕಾಯಿತು.
ಮುಖ್ಯ ರಸ್ತೆಯಲ್ಲಿನ ಯಾವುದೇ ಕಾಮಗಾರಿಯನ್ನು ವಾಹನ ಸಂಚಾರ ಕಡಿಮೆ ಇರುವ ಸಮಯವಾದ ತಡರಾತ್ರಿ ನಂತರ ಕೈಗೊಳ್ಳಬೇಕು. ಹಗಲು ಹೊತ್ತಿನಲ್ಲಿ ಕಾಮಗಾರಿ ಕೈಗೊಂಡಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವುದು ತಪ್ಪಿದ್ದಲ್ಲವೆಂದು ಪ್ರಯಾಣಿಕರು ಸಲಹೆ ನೀಡುತ್ತಿದ್ದರು. ಹಗಲು ಹೊತ್ತಿನಲ್ಲಿ ಕಾಮಗಾರಿ ಕೈಗೊಂಡಿದ್ದರಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement